< ಯೆಶಾಯನು 62 >
1 ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.
我因锡安必不静默, 为耶路撒冷必不息声, 直到他的公义如光辉发出, 他的救恩如明灯发亮。
2 ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.
列国必见你的公义; 列王必见你的荣耀。 你必得新名的称呼, 是耶和华亲口所起的。
3 ಯೆಹೋವ ದೇವರ ಕೈಯಲ್ಲಿ ಮಹಿಮೆಯ ಕಿರೀಟವಾಗಿಯೂ, ನಿನ್ನ ದೇವರ ಅಂಗೈಯಲ್ಲಿ ರಾಜ ಮುಕುಟವಾಗಿಯೂ ಇರುವೆ.
你在耶和华的手中要作为华冠, 在你 神的掌上必作为冕旒。
4 ಇನ್ನು ಮೇಲೆ ನೀನು ಗಂಡಬಿಟ್ಟವಳೆಂದು ಎನಿಸಿಕೊಳ್ಳುವುದಿಲ್ಲ ನಿನ್ನ ದೇಶಕ್ಕೆ ಹಾಳಾದದ್ದು ಎಂಬ ಹೆಸರೂ ಇರುವುದಿಲ್ಲ. ಆದರೆ ನೀನು ಹೆಪ್ಸಿಬಾ ಎಂದೂ ನಿನ್ನ ದೇಶಕ್ಕೆ ಬ್ಯೂಲಾ ಎಂದೂ ಹೆಸರಾಗುವುದು. ಏಕೆಂದರೆ ಯೆಹೋವ ದೇವರು ನಿನ್ನನ್ನು ಮೆಚ್ಚುವರು, ನಿನ್ನ ದೇಶಕ್ಕೆ ವಿವಾಹವಾಗುವುದು.
你必不再称为“撇弃的”; 你的地也不再称为“荒凉的”。 你却要称为“我所喜悦的”; 你的地也必称为“有夫之妇”。 因为耶和华喜悦你, 你的地也必归他。
5 ಯುವಕನು ಕನ್ಯೆ ಯುವತಿಯನ್ನು ವರಿಸುವಂತೆ, ನಿನ್ನ ಜನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು. ವರನು ವಧುವಿನ ಮೇಲೆ ಆನಂದ ಪಡುವ ಪ್ರಕಾರ, ನಿನ್ನ ದೇವರು ನಿನ್ನ ಮೇಲೆ ಆನಂದಿಸುವರು.
少年人怎样娶处女, 你的众民也要照样娶你; 新郎怎样喜悦新妇, 你的 神也要照样喜悦你。
6 ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ. ಅವರು ಹಗಲಿರುಳು ಮೌನವಾಗಿರುವುದೇ ಇಲ್ಲ. ಯೆಹೋವ ದೇವರಿಗೆ ಜ್ಞಾಪಕಪಡಿಸುವವರೇ, ನೀವೂ ಸುಮ್ಮನಿರಬೇಡಿರಿ.
耶路撒冷啊, 我在你城上设立守望的, 他们昼夜必不静默。 呼吁耶和华的,你们不要歇息,
7 ಯೆರೂಸಲೇಮನ್ನು ಸ್ಥಾಪಿಸಿ, ಲೋಕಪ್ರಸಿದ್ಧಿಗೆ ತರುವ ತನಕ ಆತನಿಗೂ ವಿಶ್ರಾಂತಿ ಕೊಡಬೇಡಿರಿ.
也不要使他歇息, 直等他建立耶路撒冷, 使耶路撒冷在地上成为可赞美的。
8 ಯೆಹೋವ ದೇವರು ತನ್ನ ಬಲಗೈಯಿಂದಲೂ, ತನ್ನ ಬಲವುಳ್ಳ ತೋಳಿನಿಂದಲೂ ಆಣೆಯಿಟ್ಟು ಹೇಳಿದ್ದೇನೆಂದರೆ: “ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವುದಿಲ್ಲ. ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ವಿದೇಶಿಯರು ಕುಡಿಯುವುದಿಲ್ಲ.
耶和华指着自己的右手和大能的膀臂起誓说: 我必不再将你的五谷给你仇敌作食物; 外邦人也不再喝你劳碌得来的新酒。
9 ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆ ಹಾಕಿದವರೇ, ಅದನ್ನು ಉಂಡು ಯೆಹೋವ ದೇವರನ್ನು ಸ್ತುತಿಸುವರು. ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು.”
惟有那收割的要吃,并赞美耶和华; 那聚敛的要在我圣所的院内喝。
10 ಹಾದುಹೋಗಿರಿ, ಬಾಗಿಲುಗಳಲ್ಲಿ ಹಾದುಹೋಗಿರಿ, ಜನರಿಗೆ ದಾರಿಯನ್ನು ಸಿದ್ಧಮಾಡಿರಿ, ಎತ್ತರಿಸಿರಿ, ರಾಜಮಾರ್ಗವನ್ನು ಎತ್ತರಿಸಿ, ಕಲ್ಲುಗಳನ್ನು ಆಯ್ದು ಕೂಡಿಸಿರಿ. ಜನಾಂಗಗಳಿಗೋಸ್ಕರ ಧ್ವಜವನ್ನು ಎತ್ತಿರಿ.
你们当从门经过经过, 预备百姓的路; 修筑修筑大道, 捡去石头, 为万民竖立大旗,
11 ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’”
看哪,耶和华曾宣告到地极, 对锡安的居民说: 你的拯救者来到。 他的赏赐在他那里; 他的报应在他面前。
12 ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.
人必称他们为“圣民”,为“耶和华的赎民”; 你也必称为“被眷顾、不撇弃的城”。