< ಆದಿಕಾಂಡ 7 >
1 ಯೆಹೋವ ದೇವರು ನೋಹನಿಗೆ, “ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ.
Και είπε Κύριος προς τον Νώε, Είσελθε συ, και πας ο οίκός σου, εις την κιβωτόν· διότι σε είδον δίκαιον ενώπιόν μου εν τη γενεά ταύτη·
2 ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡು, ಹೆಣ್ಣುಗಳನ್ನೂ, ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು, ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು.
από πάντων των κτηνών των καθαρών λάβε εις σεαυτόν επτά επτά, άρσεν και το θήλυ αυτού· και από των κτηνών των μη καθαρών ανά δύο, άρσεν και το θήλυ αυτού·
3 ಆಕಾಶದ ಪಕ್ಷಿಗಳಲ್ಲಿ ಗಂಡು, ಹೆಣ್ಣು ಏಳೇಳರಂತೆ ತೆಗೆದುಕೊಂಡು, ಭೂಮಿಯ ಮೇಲೆಲ್ಲಾ ಅವುಗಳ ಸಂತತಿಯನ್ನು ಜೀವಂತವಾಗಿ ಉಳಿಸಬೇಕು.
και από των πτηνών του ουρανού επτά επτά, άρσεν και θήλυ· διά να διατηρήσης σπέρμα επί προσώπου πάσης της γής·
4 ಏಳು ದಿವಸಗಳಾದ ಮೇಲೆ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳು ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಪ್ರತಿಯೊಂದು ಜೀವರಾಶಿಯನ್ನೂ ಭೂಮಿಯ ಮೇಲಿಂದ ಅಳಿಸಿಬಿಡುತ್ತೇನೆ,” ಎಂದರು.
επειδή έτι μετά επτά ημέρας εγώ φέρω βροχήν επί της γης τεσσαράκοντα ημέρας και τεσσαράκοντα νύκτας· και θέλω εξαλείψει από προσώπου της γης παν ό, τι υπάρχει, το οποίον εποίησα.
5 ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನೂ ಮಾಡಿದನು.
Και έκαμεν ο Νώε κατά πάντα όσα προσέταξεν εις αυτόν ο Κύριος.
6 ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು.
Ήτο δε ο Νώε εξακοσίων ετών, ότε έγεινεν ο κατακλυσμός των υδάτων επί της γης.
7 ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು.
Και εισήλθεν ο Νώε, και οι υιοί αυτού, και η γυνή αυτού, και αι γυναίκες των υιών αυτού μετ' αυτού, εις την κιβωτόν, εξ αιτίας των υδάτων του κατακλυσμού.
8 ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ
Από των κτηνών των καθαρών, και από των κτηνών των μη καθαρών, και από των πτηνών, και από πάντων των ερπόντων επί της γης,
9 ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು.
δύο δύο εισήλθον προς τον Νώε εις την κιβωτόν, άρσεν και θήλυ, καθώς προσέταξεν ο Θεός εις τον Νώε.
10 ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.
Και μετά τας επτά ημέρας, τα ύδατα του κατακλυσμού επήλθον επί της γης.
11 ನೋಹನ ಜೀವನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾಸಾಗರದ ಸೆಲೆಗಳು ಒಡೆದವು. ಆಕಾಶದ ಪ್ರವಾಹದ ದ್ವಾರಗಳು ತೆರೆದವು.
Το εξακοσιοστόν έτος της ζωής του Νώε, τον δεύτερον μήνα, την δεκάτην εβδόμην ημέραν του μηνός, ταύτην την ημέραν εσχίσθησαν πάσαι αι πηγαί της μεγάλης αβύσσου, και οι καταρράκται των ουρανών ηνοίχθησαν.
12 ನಲವತ್ತು ದಿವಸ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು.
Και έγεινεν ο υετός επί της γης τεσσαράκοντα ημέρας και τεσσαράκοντα νύκτας.
13 ಅದೇ ದಿನದಲ್ಲಿ ನೋಹನು ಮತ್ತು ಅವನ ಪುತ್ರರಾದ ಶೇಮ್, ಹಾಮ್, ಯೆಫೆತ್ ಇವರೂ ನೋಹನ ಹೆಂಡತಿಯೂ ಅವನ ಪುತ್ರರ ಹೆಂಡತಿಯರೂ ನಾವೆಯನ್ನು ಪ್ರವೇಶಿಸಿದರು.
Κατά την αυτήν ταύτην ημέραν εισήλθεν ο Νώε, και οι υιοί του Νώε, Σημ και Χαμ και Ιάφεθ, και η γυνή του Νώε, και αι τρεις γυναίκες των υιών αυτού μετ' αυτών, εις την κιβωτόν·
14 ಇದಲ್ಲದೆ ತಮ್ಮ ತಮ್ಮ ಜಾತಿಗನುಸಾರವಾಗಿ ಎಲ್ಲಾ ಕಾಡು ಮೃಗಗಳೂ ಎಲ್ಲಾ ಪಶುಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳೂ ಎಲ್ಲಾ ಪಕ್ಷಿಗಳೂ ಎಲ್ಲಾ ವಿಧವಾದ ರೆಕ್ಕೆಯಿರುವ ಜೀವಿಗಳೂ ಪ್ರವೇಶಿಸಿದವು.
αυτοί, και πάντα τα ζώα κατά το είδος αυτών, και πάντα τα κτήνη κατά το είδος αυτών, και πάντα τα ερπετά τα έρποντα επί της γης κατά το είδος αυτών, και πάντα τα πτηνά κατά το είδος αυτών, και παν πτερωτόν παντός είδους.
15 ಹೀಗೆ ಜೀವಶ್ವಾಸವಿರುವ ಎಲ್ಲಾ ಸೃಷ್ಟಿಗಳಲ್ಲಿ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು.
Και εισήλθον προς τον Νώε εις την κιβωτόν, δύο δύο από πάσης σαρκός ήτις έχει πνεύμα ζωής.
16 ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
Και τα εισερχόμενα, άρσεν και θήλυ από πάσης σαρκός, εισήλθον, καθώς προσέταξεν εις αυτόν ο Θεός· και έκλεισεν ο Κύριος την κιβωτόν επάνω αυτού.
17 ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು.
Και έγεινεν ο κατακλυσμός τεσσαράκοντα ημέρας επί της γής· και επληθύνθησαν τα ύδατα, και εσήκωσαν την κιβωτόν, και υψώθη υπεράνω της γης.
18 ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು.
Και εκραταιούντο τα ύδατα, και επληθύνοντο σφόδρα επί της γής· και η κιβωτός εφέρετο επί της επιφανείας των υδάτων.
19 ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು.
Και τα ύδατα υπερεκραταιούντο σφόδρα επί της γής· και εσκεπάσθησαν πάντα τα όρη τα υψηλά τα υποκάτω παντός του ουρανού.
20 ನೀರು ಬೆಟ್ಟವನ್ನು ಮುಚ್ಚಿ ಅವುಗಳ ಮೇಲೆ ಸುಮಾರು ಏಳು ಮೀಟರಷ್ಟು ಏರಿತು.
Δεκαπέντε πήχας υπεράνω υψώθησαν τα ύδατα, και εσκεπάσθησαν τα όρη.
21 ಪಕ್ಷಿಗಳು, ಪಶುಗಳು, ಕಾಡುಮೃಗಗಳು, ನೆಲದ ಮೇಲೆ ಚಲಿಸುವ ಸಕಲ ಪ್ರಾಣಿಗಳು ಮತ್ತು ಮನುಷ್ಯರು ನಾಶವಾದರು.
Και απέθανε πάσα σαρξ κινουμένη επί της γης, των πτηνών και των κτηνών και των ζώων, και πάντων των ερπετών των ερπόντων επί της γης, και πας άνθρωπος.
22 ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು.
Εκ πάντων των όντων επί της ξηράς, πάντα όσα είχον πνοήν ζωής εις τους μυκτήρας αυτών, απέθανον.
23 ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು.
Και εξηλείφθη παν το υπάρχον επί του προσώπου της γης, από ανθρώπου έως κτήνους, έως ερπετού και έως πτηνού του ουρανού, και εξηλείφθησαν από της γής· έμενε δε μόνον ο Νώε, και όσα ήσαν μετ' αυτού εν τη κιβωτώ.
24 ಜಲವು ಭೂಮಿಯ ಮೇಲೆ ನೂರೈವತ್ತು ದಿನ ಮುಂದುವರೆಯಿತು.
Και εκραταιούντο τα ύδατα επί της γης εκατόν πεντήκοντα ημέρας.