< ಧರ್ಮೋಪದೇಶಕಾಂಡ 22 >
1 ಸ್ವದೇಶದವನ ಎತ್ತಾಗಲಿ, ಕುರಿಯಾಗಲಿ ದಾರಿತಪ್ಪಿ ಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟುಹೋಗಬಾರದು. ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
आफ्नो इस्राएली छिमेकीको गोरु वा भेडा तर्केर गएको देख्दा त्यसलाई नदेखेको जस्तो नगर्नू । तिमीले त्यसलाई फर्काएर त्यसकहाँ ल्याइदिनू ।
2 ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆ ಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿ ಕೊಡಬೇಕು.
तिम्रो इस्राएली छिमेकी तिम्रो नजिक छैन भने वा तिमीले त्यसलाई चिन्दैनौ भने तिमीले त्यो पशु आफ्नो घरमा ल्याउनू र छिमेकीले नखोजेसम्म त्यो तिम्रो घरमा हुने छ । तब यो तिमीले त्यसलाई दिनू ।
3 ಅವನ ಕತ್ತೆಯಾಗಲಿ, ಅವನ ವಸ್ತ್ರವಾಗಲಿ, ನಿನ್ನ ಸಹೋದರನು ಕಳೆದುಕೊಂಡ ಯಾವ ವಸ್ತುಗಳೇ ಆಗಲಿ ನೀನು ಕಂಡುಕೊಂಡರೆ, ಹಾಗೆಯೇ ಮಾಡಬೇಕು. ನೀನು ಕಾಣದವರಂತೆ ಇರಬಾರದು.
त्यसको गधाको मामलामा पनि यसै गर्नू; त्यसको लुगाको सवालमा पनि यसै गर्नू । तिम्रो इस्राएली छिमेकीको हराएको कुनै पनि कुरो पाइएको खण्डमा यसै गर्नू । तिमीले आफ्नै लागि नलुकाउनू ।
4 ನಿನ್ನ ಸಹೋದರನ ಕತ್ತೆಯಾಗಲಿ, ಎತ್ತಾಗಲಿ, ಮಾರ್ಗದಲ್ಲಿ ಬಿದ್ದಿರುವುದನ್ನು ನೋಡಿದರೆ ಅಲಕ್ಷ್ಯ ಮಾಡಬೇಡ. ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
तिम्रो इस्राएली छिमेकीको गधा वा गोरु बाटोमा लोटेको देख्यौ भने नदेखेको जस्तो नगर्नू । त्यसलाई उठाउन मदत गर्नू ।
5 ಸ್ತ್ರೀಯು ಪುರುಷನ ವಸ್ತ್ರ ಉಟ್ಟುಕೊಳ್ಳಬಾರದು, ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು. ಏಕೆಂದರೆ ಹೀಗೆ ಮಾಡುವವರೆಲ್ಲ ಯೆಹೋವ ದೇವರಿಗೆ ಅಸಹ್ಯ.
पुरुषले लगाउने वस्त्र स्त्रीले लगाउनुहुँदैन न त स्त्रीले लगाउने वस्त्र पुरुषले लगाउनुहुन्छ । किनकि यी कुरा गर्ने जोसुकै परमप्रभु तिमीहरूका परमेश्वरका लागि घृणित हुने छ ।
6 ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು.
कुनै बाटो वा रुख वा भुइँमा बचेरो वा फुलमा माउ बसिरहेको देख्यौ भने माउलाई बचेरोसँगै नलैजानू ।
7 ನಿನಗೆ ಒಳ್ಳೆಯದಾಗುವ ಹಾಗೆಯೂ ಬಹುಕಾಲ ಬಾಳುವ ಹಾಗೆಯೂ ಹೇಗಾದರೂ ತಾಯಿಯನ್ನು ಕಳುಹಿಸಿಬಿಟ್ಟು, ಮರಿಗಳನ್ನು ತೆಗೆದುಕೊಳ್ಳಬಹುದು.
माउलाई जान दिएर बचेरोलाई लैजान सक्छौ । यो आज्ञालाई पालन गर ताकि तिमीहरूको भलो हुन सकोस्, र तिमीहरूको आयु लामो होस् ।
8 ನೀನು ಹೊಸ ಮನೆಯನ್ನು ಕಟ್ಟಿದಾಗ, ಯಾರೂ ಅದರ ಮೇಲಿನಿಂದ ಬಿದ್ದು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಬೇಕು.
तिमीहरूले नयाँ घर बनाउँदा छतको चारैतिर बार लगाउनू ताकि त्यहाँबाट कोही लड्यो भने त्यसको दोष तिमीहरूको घरलाई नलागोस् ।
9 ನಿನ್ನ ದ್ರಾಕ್ಷಿತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜವೂ, ಬಿತ್ತಿದ ಬೀಜದ ಪೈರೂ, ದ್ರಾಕ್ಷಿತೋಟದ ಹುಟ್ಟುವಳಿಯೂ ಅಶುದ್ಧವಾಗುವುದು.
तिमीहरूले दाखबारीमा दुई किसिमका बिउ नलागाउनू । नत्रता तिमीहरूले त्यसो गर्यौ भने तिमीहरूले लगाएको बिउ मात्र नभई दाखबारीसमेत अपवित्र हुने छ ।
10 ಎತ್ತನ್ನೂ, ಕತ್ತೆಯನ್ನೂ ಜೊತೆ ಮಾಡಿ, ನೇಗಿಲಿಗೆ ಕಟ್ಟಬಾರದು.
गोरु र गधा सँगसँगै नारेर नजोत्नू ।
11 ನಾರು ಮತ್ತು ಉಣ್ಣೆ ಎರಡೂ ಕೂಡಿರುವ ಬಟ್ಟೆಯನ್ನೂ ಧರಿಸಬಾರದು.
ऊन र सुती मिसाएर बनाइएको लुगा नलगाउनू ।
12 ನೀನು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
तिमीहरूले लगाउने लुगाको चारै कुनामा झुम्का लगाउनू ।
13 ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ,
मानौँ, कसैले विवाह गरेर पत्नीसित सुतिसकेपछि त्यसलाई घृणा गर्छ र
14 ಅವಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ, “ನಾನು ಇವಳನ್ನು ಮದುವೆ ಮಾಡಿಕೊಂಡೆ, ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು,” ಎಂದು ಹೇಳಿ ಅವಳ ಮೇಲೆ ಆಪಾದನೆ ತರಬಹುದು.
र बदनाम गराउने नियतले पत्नीलाई यसो भन्छ, 'मैले यो स्त्रीलाई ल्याएँ, तर म त्योसित सुत्न जाँदा त्यो कन्या केटी भएको पाइनँ ।'
15 ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು, ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
तब त्यस केटीका बुबाआमाले सहरको मूल ढोकामा धर्म-गुरुहरूकहाँ त्यसको कुमारीत्वको प्रमाण ल्याउनुपर्छ ।
16 ಆಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇನೆಂದರೆ, “ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿಯಾಗಿ ಕೊಟ್ಟಿದ್ದೇನೆ, ಅವನು ಅವಳನ್ನು ದ್ವೇಷಿಸಿ,
केटीका बुबाले धर्म-गुरुहरूलाई यसो भन्नुपर्छ, 'मैले यो मानिसलाई मेरी छोरी त्यसकी पत्नी हुनलाई दिएँ र त्यसले यसलाई घृणा गर्छ ।
17 ಅವನು, ‘ನಿನ್ನ ಮಗಳು ಕನ್ನಿಕೆಯಲ್ಲವೆಂದು ಕಂಡೆನೆಂಬುದಾಗಿ, ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟಿದ್ದಾನೆ.’ ಆದರೂ ನನ್ನ ಮಗಳ ಕನ್ಯಾಲಕ್ಷಣಕ್ಕೆ ಇದೇ ಪ್ರಮಾಣ,” ಎಂದು ಹೇಳಿ, ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
हेर, त्यसले यसलाई घृणा गरी लाजमर्दो अभियोग लगाएको छ, “मैले तिम्री छोरीमा कुमारीत्वको प्रमाण पाइनँ ।” तर मेरी छोरीको कुमारीत्वको प्रमाण यहाँ छ ।' तब तिनीहरूले सहरका धर्म-गुरुहरूको सामु त्यो लुगा फिँजाओस् ।
18 ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಬಂದು ಅವನನ್ನು ಶಿಕ್ಷಿಸಬೇಕು.
त्यस सहरका धर्म-गुरुहरूले त्यस पुरुषलाई समातेर दण्ड दिऊन् ।
19 ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ನಿಕೆಯ ಹೆಸರನ್ನು ಕೆಡಿಸಿದ್ದರಿಂದ, ಅವನಿಗೆ ನೂರು ಬೆಳ್ಳಿ ಶೆಕೆಲ್‌ಗಳ ದಂಡವನ್ನು ವಿಧಿಸಿ, ಅದನ್ನು ಆ ಹುಡುಗಿಯ ತಂದೆಗೆ ಕೊಡಬೇಕು. ಇದಲ್ಲದೆ ಅವಳು ಅವನಿಗೆ ಹೆಂಡತಿಯಾಗಬೇಕು, ಅವನು ಬದುಕಿರುವವರೆಗೆ ಅವಳನ್ನು ಪರಿತ್ಯಾಗಮಾಡಬಾರದು.
अनि तिनीहरूले त्यसलाई चाँदीको एक सय सिक्काको जरिवाना तिराई त्यो केटी र केटीका पितालाई दिऊन् किनकि त्यस मानिसले इस्राएलको कुमारीत्वको बारेमा कलङ्क लगाएको छ । त्यो केटी त्यसकै पत्नी हुनुपर्छ । त्यसले जीवनभर त्यस केटीलाई त्याग्न पाउँदैन ।
20 ಆದರೆ ಆ ಮಾತು ಸತ್ಯವಾಗಿದ್ದರೆ, ಆ ಹುಡುಗಿಯಲ್ಲಿ ಕನ್ಯಾಲಕ್ಷಣ ಕಾಣದೆ ಇದ್ದರೆ,
तर केटीमा कुमारीत्वको प्रमाण नपाइएको कुरो साँचो रहेछ भने
21 ಆ ಹುಡುಗಿಯನ್ನು ಅವಳ ತಂದೆಯ ಮನೆ ಬಾಗಿಲಿಗೆ ತರಬೇಕು. ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು. ಏಕೆಂದರೆ ಅವಳು ತಂದೆಯ ಮನೆಯಲ್ಲಿರುವಾಗಲೇ ಅಕ್ರಮವಾಗಿ ನಡೆದು, ಇಸ್ರಾಯೇಲಿನಲ್ಲಿ ಸೂಳೆತನ ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
तिनीहरूले केटीलाई त्यसका बुबाको घरको ढोकामा ल्याऊन्, र सहरका मानिसहरूले त्यसलाई ढुङ्गाले हानेर मारून् किनकि त्यसले इस्राएलमा आफ्नो पिताको घरमा वेश्यावृत्तिको कार्य गरी लाजमर्दो काम गरेकी छे । यसरी तिमीहरूले तिमीहरूका बिचबाट दुष्टता हटाउनू ।
22 ಒಬ್ಬ ಮನುಷ್ಯನು ಪರನ ಹೆಂಡತಿಯೊಡನೆ ಮಲಗಿಕೊಂಡವನಾಗಿ ಸಿಕ್ಕಿಬಿದ್ದರೆ, ಆ ಸ್ತ್ರೀಯ ಸಂಗಡ ಮಲಗಿಕೊಂಡ ಮನುಷ್ಯನೂ ಆ ಸ್ತ್ರೀಯೂ ಇಬ್ಬರೂ ಸಾಯಬೇಕು. ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
कुनै पुरुषले अर्काकी पत्नीसित सहवास गरिरहेको फेला पर्यो भने सहवास गर्ने पुरुष र स्त्री दुवै जना मारिऊन् । यसरी तिमीहरूले तिमीहरूका बिचबाट दुष्टता हटाउनू ।
23 ಕನ್ನಿಕೆಯಾದ ಒಬ್ಬ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯ ಮಾಡಿರಲಾಗಿ, ಮತ್ತೊಬ್ಬ ಮನುಷ್ಯನು ಆ ಪಟ್ಟಣದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ,
कुनै कन्या केटीको कुनै पुरुषसित मगनी भएको छ र अर्को पुरुषले सहरमा त्योसित सहवास गर्यो भने
24 ಅವರಿಬ್ಬರನ್ನೂ ಆ ಪಟ್ಟಣದ ಬಾಗಿಲಿನ ಹೊರಗೆ ತಂದು, ಅವರು ಸಾಯುವ ಹಾಗೆ ಕಲ್ಲೆಸೆಯಬೇಕು. ಆ ಹುಡುಗಿಯು ಪಟ್ಟಣದಲ್ಲಿ ಇದ್ದರೂ, ಕೂಗದೆ ಇದ್ದದ್ದರಿಂದಲೂ, ಆ ಮನುಷ್ಯನು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
दुवै जनालाई सहरको मूल ढोकामा ल्याई ढुङ्गाले हानेर मार्नू । सहरभित्र भएर पनि केटी नचिच्च्याएकीले त्यसलाई ढुङ्गाले हानेर मार्नू । आफ्नो छिमेकीकी पत्नीको सतीत्व नष्ट गरेकोले पुरुषलाई ढुङ्गाले हानेर मार्नू । यसरी तिमीहरूले तिमीहरूका बिचबाट दुष्टता हटाउनू ।
25 ಆದರೆ ಆ ಮನುಷ್ಯನು ನಿಶ್ಚಯಮಾಡಿದ ಹುಡುಗಿಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ, ಅವಳ ಸಂಗಡ ಮಲಗಿದರೆ, ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬಾರದು.
तर कुनै पुरुषले मगनी भएकी केटीलाई खेतमा फेला पारी त्योसित जबरजस्ती सहवास गरेको रहेछ भने पुरुष मात्र मारियोस् ।
26 ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
तर केटीलाई चाहिँ केही नगर्नू । केटीले मृत्युदण्ड पाउने कुनै काम गरेकी छैन । यो कुनै मानिसले आफ्नो छिमेकीलाई आक्रमण गरी मारेको जस्तै सवाल हो ।
27 ಏಕೆಂದರೆ ಅವನು ಹೊಲದಲ್ಲಿ ಅವಳನ್ನು ಕಂಡನು, ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು. ಆದರೆ ರಕ್ಷಿಸುವವನು ಅವಳಿಗೆ ಯಾರೂ ಇರಲಿಲ್ಲ.
किनकि पुरुषले स्त्रीलाई खेतमा फेला पारेको थियो र मगनी भएकी केटी चिच्च्याइकी थिई, तर त्यसलाई बचाउन त्यहाँ कोही थिएन ।
28 ಒಬ್ಬ ಮನುಷ್ಯನು ನಿಶ್ಚಯ ಮಾಡದಿರುವ ಕನ್ಯೆಯನ್ನು ಕಂಡು, ಅವಳನ್ನು ಹಿಡಿದು, ಅವಳ ಸಂಗಡ ಮಲಗಿ ಸಿಕ್ಕಿಬಿದ್ದರೆ,
कुनै पुरुषले मगनी नभएकी केटीलाई फेला पारी त्यससित जबरजस्ती सहवास गर्यो र त्यो कुरो प्रकाशमा आयो भने
29 ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು, ಏಕೆಂದರೆ ಅವನು ಅವಳನ್ನು ಕೆಡಿಸಿದ್ದರಿಂದ, ಬದುಕುವ ದಿವಸಗಳೆಲ್ಲಾ ಅವಳನ್ನು ಪರಿತ್ಯಾಗಮಾಡಬಾರದು.
त्यस पुरुषले केटीका बुबालाई चाँदीका पचास सिक्का देओस्, र त्यो केटी त्यसकी पत्नी होस् किनकि त्यसले केटीलाई अपमान गरेको छ । त्यसको जीवनभर त्यसले केटीलाई त्याग्न पाउँदैन ।
30 ಯಾರೂ ತನ್ನ ತಂದೆಯ ಹೆಂಡತಿಯನ್ನು ಮದುವೆ ಮಾಡಿಕೊಳ್ಳಬಾರದು. ತನ್ನ ತಂದೆಯ ಹಾಸಿಗೆಯನ್ನು ಅಗೌರವಿಸಬಾರದು.
कुनै मानिसले आफ्नो बुबाकी पत्नीलाई आफ्नी पत्नी नतुल्याओस् । त्यसले आफ्ना बुबाको वैवाहिक अधिकारलाई हरण गर्नुहुँदैन ।