< ಜ್ಞಾನೋಕ್ತಿಗಳು 28 >
1 ೧ ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು, ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು.
Omumɔyɛfo guan bere a obiara ntaa no, nanso atreneefo koko yɛ duru sɛ gyata.
2 ೨ ಅಧರ್ಮದಿಂದ ದೇಶದಲ್ಲಿ ಬಹು ನಾಯಕರಿರುವರು, ಜ್ಞಾನಿಗಳೂ, ವಿವೇಕಿಗಳೂ ಆದವರಿಂದ ಧರ್ಮವು ಶಾಶ್ವತವಾಗಿರುವುದು.
Atuatewman nya sodifo pii, nanso onipa a ɔwɔ nhumu ne nimdeɛ ma mmara yɛ adwuma.
3 ೩ ಬಡವರನ್ನು ಹಿಂಸಿಸುವ ದರಿದ್ರನು, ಒಂದು ಕಾಳೂ ಉಳಿಯದಂತೆ ಪೈರನ್ನು ಬಡಿಯುವ ಮಳೆಯ ಹಾಗೆ.
Sodifo a ɔhyɛ ahiafo so no te sɛ osu mu ahum a ennyaw nnɔbae bi wɔ akyi.
4 ೪ ಧರ್ಮೋಪದೇಶವನ್ನು ಕೈಕೊಳ್ಳದವರು ದುಷ್ಟರನ್ನು ಹೊಗಳುವರು, ಕೈಕೊಳ್ಳುವವರು ಅವರನ್ನು ಎದುರಿಸುವರು.
Wɔn a wɔpo mmara no kamfo amumɔyɛfo, na wɔn a wodi mmara so no siw wɔn kwan.
5 ೫ ಕೆಟ್ಟವರು ನ್ಯಾಯವನ್ನು ಗ್ರಹಿಸರು, ಯೆಹೋವನ ಭಕ್ತರು ಸಮಸ್ತವನ್ನು ಗ್ರಹಿಸುವರು.
Abɔnefo nte atɛntrenee ase, nanso wɔn a wɔhwehwɛ Awurade no, te ase yiye.
6 ೬ ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ, ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು.
Ohiani a ne nantew ho nni asɛm ye sen ɔdefo a nʼakwan yɛ kɔntɔnkye.
7 ೭ ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು.
Nea odi mmara so yɛ ɔba a ɔwɔ nhumu, nanso nea ɔne adidibradafo bɔ no gu nʼagya anim ase.
8 ೮ ಬಡ್ಡಿ ಮತ್ತು ಅನ್ಯಾಯ ಲಾಭದಿಂದ ವೃದ್ಧಿಯಾದ ಆಸ್ತಿಯು ಬಡವರಲ್ಲಿ ಕನಿಕರಪಡುವವನ ಪಾಲಾಗುವುದು.
Nea ogye mfɛntom mmoroso de nya ne ho no, ɔboaboa ano ma nea ɔbɛyɛ ahiafo adɔe.
9 ೯ ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.
Sɛ obi nni mmara so a, ne mpaebɔ mpo yɛ akyiwade.
10 ೧೦ ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು.
Nea odi atreneefo anim de wɔn fa ɔkwan bɔne so no bɛhwe ɔno ankasa afiri mu, nanso wɔn a wɔn ho nni asɛm no benya agyapade a eye.
11 ೧೧ ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು.
Ɔdefo tumi yɛ onyansafo wɔ nʼankasa ani so, nanso ohiani a ɔwɔ nhumu no hu sɛnea ɔte.
12 ೧೨ ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.
Sɛ atreneefo di nkonim a, nnipa di ahurusi pii; nanso sɛ amumɔyɛfo nya tumi a nnipa kohintaw.
13 ೧೩ ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
Onipa a ɔkata ne bɔne so no nnya nkɔso, na nea ɔka ne bɔne na ogyae yɛ no nya ahummɔbɔ.
14 ೧೪ ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು.
Nhyira nka nea osuro Awurade bere nyinaa, nanso nea opirim ne koma no tɔ amane mu.
15 ೧೫ ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ.
Omumɔyɛfo a odi nnipa a wonni mmoa so no te sɛ gyata a ɔbobɔ mu anaa sisi a nʼani abere.
16 ೧೬ ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು.
Ɔsodifo tirimɔdenfo nni adwene, na nea okyi mfaso a wɔnam ɔkwan bɔne so nya no benya nkwa tenten.
17 ೧೭ ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.
Nea awudi ma ne tiboa bu no fɔ no bɛyɛ ɔkobɔfo akosi ne wu da; wɔmma obiara nsiw no kwan.
18 ೧೮ ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು.
Nea ne nantew ho nni asɛm no, wogye no fi ɔhaw mu, nanso nea nʼakwan yɛ kɔntɔnkye no bɛhwe ase mpofirim.
19 ೧೯ ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.
Nea ɔyɛ nʼasase so adwuma no benya aduan pii, nanso wɔn a wodi nnaadaasɛm akyi no benya wɔn so ne wɔn hia.
20 ೨೦ ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು.
Wobehyira onipa nokwafo pii, na nea ɔpere pɛ ahonyade no remfa ne ho nni.
21 ೨೧ ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು.
Nhwɛanim nye, nanso aduan kakraa bi nti nnipa bɛyɛ bɔne.
22 ೨೨ ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು.
Nea ɔyɛ pɛpɛe pere sɛ ɔbɛyɛ ɔdefo na onnim sɛ ohia retwɛn no.
23 ೨೩ ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.
Nea ɔka obi anim no bɛsɔ nnipa ani akyiri no asen nea ɔwɔ tɛkrɛmadɛ.
24 ೨೪ ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.
Nea ɔbɔ nʼagya anaa ne na korɔn na ɔka se, “Ɛnyɛ bɔne no,” ɔne ɔsɛefo na ɛbɔ.
25 ೨೫ ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು.
Odifudepɛfo de mpaapaemu ba na nea ɔde ne ho to Awurade so no benya nkɔso.
26 ೨೬ ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.
Nea ogye ne ho di no yɛ ɔkwasea, na nea ɔnantew nyansa mu no wobegye no.
27 ೨೭ ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು.
Nea ɔma ahiafo no, hwee renhia no, nanso nea obu nʼani gu wɔn so no nya nnome pii.
28 ೨೮ ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.
Sɛ amumɔyɛfo nya tumi a, nnipa kohintaw; na sɛ amumɔyɛfo ase tɔre a, atreneefo ase dɔ.