< ಯೂದನು ಬರೆದ ಪತ್ರಿಕೆ 1 >

1 ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,
யீஸு²க்²ரீஷ்டஸ்ய தா³ஸோ யாகூபோ³ ப்⁴ராதா யிஹூதா³ஸ்தாதேநேஸ்²வரேண பவித்ரீக்ரு’தாந் யீஸு²க்²ரீஷ்டேந ரக்ஷிதாம்’ஸ்²சாஹூதாந் லோகாந் ப்ரதி பத்ரம்’ லிக²தி|
2 ನಿಮಗೆ ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.
க்ரு’பா ஸா²ந்தி​: ப்ரேம ச பா³ஹுல்யரூபேண யுஷ்மாஸ்வதி⁴திஷ்ட²து|
3 ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
ஹே ப்ரியா​: , ஸாதா⁴ரணபரித்ராணமதி⁴ யுஷ்மாந் ப்ரதி லேகி²தும்’ மம ப³ஹுயத்நே ஜாதே பூர்வ்வகாலே பவித்ரலோகேஷு ஸமர்பிதோ யோ த⁴ர்ம்மஸ்தத³ர்த²ம்’ யூயம்’ ப்ராணவ்யயேநாபி ஸசேஷ்டா ப⁴வதேதி விநயார்த²ம்’ யுஷ்மாந் ப்ரதி பத்ரலேக²நமாவஸ்²யகம் அமந்யே|
4 ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.
யஸ்மாத்³ ஏதத்³ரூபத³ண்ட³ப்ராப்தயே பூர்வ்வம்’ லிகி²தா​: கேசிஜ்ஜநா அஸ்மாந் உபஸ்ரு’ப்தவந்த​: , தே (அ)தா⁴ர்ம்மிகலோகா அஸ்மாகம் ஈஸ்²வரஸ்யாநுக்³ரஹம்’ த்⁴வஜீக்ரு’த்ய லம்படதாம் ஆசரந்தி, அத்³விதீயோ (அ)தி⁴பதி ர்யோ (அ)ஸ்மாகம்’ ப்ரபு⁴ ர்யீஸு²க்²ரீஷ்டஸ்தம்’ நாங்கீ³குர்வ்வந்தி|
5 ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.
தஸ்மாத்³ யூயம்’ புரா யத்³ அவக³தாஸ்தத் புந ர்யுஷ்மாந் ஸ்மாரயிதும் இச்சா²மி, ப²லத​: ப்ரபு⁴ரேகக்ரு’த்வ​: ஸ்வப்ரஜா மிஸரதே³ஸா²த்³ உத³தா⁴ர யத் தத​: பரம் அவிஸ்²வாஸிநோ வ்யநாஸ²யத்|
6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. (aïdios g126)
யே ச ஸ்வர்க³தூ³தா​: ஸ்வீயகர்த்ரு’த்வபதே³ ந ஸ்தி²த்வா ஸ்வவாஸஸ்தா²நம்’ பரித்யக்தவந்தஸ்தாந் ஸ மஹாதி³நஸ்ய விசாரார்த²ம் அந்த⁴காரமயே (அ)த⁴​: ஸ்தா²நே ஸதா³ஸ்தா²யிபி⁴ ர்ப³ந்த⁴நைரப³த்⁴நாத்| (aïdios g126)
7 ಸೊದೋಮ್ ಗೊಮೋರ ಪಟ್ಟಣಗಳವರೂ, ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. (aiōnios g166)
அபரம்’ ஸிதோ³மம் அமோரா தந்நிகடஸ்த²நக³ராணி சைதேஷாம்’ நிவாஸிநஸ்தத்ஸமரூபம்’ வ்யபி⁴சாரம்’ க்ரு’தவந்தோ விஷமமைது²நஸ்ய சேஷ்டயா விபத²ம்’ க³தவந்தஸ்²ச தஸ்மாத் தாந்யபி த்³ரு’ஷ்டாந்தஸ்வரூபாணி பூ⁴த்வா ஸதா³தநவஹ்நிநா த³ண்ட³ம்’ பு⁴ஞ்ஜதே| (aiōnios g166)
8 ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.
ததை²வேமே ஸ்வப்நாசாரிணோ(அ)பி ஸ்வஸ²ரீராணி கலங்கயந்தி ராஜாதீ⁴நதாம்’ ந ஸ்வீகுர்வ்வந்த்யுச்சபத³ஸ்தா²ந் நிந்த³ந்தி ச|
9 ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, “ಕರ್ತನು ನಿನ್ನನ್ನು ಗದರಿಸಲಿ” ಎಂದನು.
கிந்து ப்ரதா⁴நதி³வ்யதூ³தோ மீகா²யேலோ யதா³ மூஸஸோ தே³ஹே ஸ²யதாநேந விவத³மாந​: ஸமபா⁴ஷத ததா³ திஸ்மந் நிந்தா³ரூபம்’ த³ண்ட³ம்’ ஸமர்பயிதும்’ ஸாஹஸம்’ ந க்ரு’த்வாகத²யத் ப்ரபு⁴ஸ்த்வாம்’ ப⁴ர்த்ஸயதாம்’|
10 ೧೦ ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
கிந்த்விமே யந்ந பு³த்⁴யந்தே தந்நிந்த³ந்தி யச்ச நிர்ப்³போ³த⁴பஸ²வ இவேந்த்³ரியைரவக³ச்ச²ந்தி தேந நஸ்²யந்தி|
11 ೧೧ ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.
தாந் தி⁴க், தே காபி³லோ மார்கே³ சரந்தி பாரிதோஷிகஸ்யாஸா²தோ பி³லியமோ ப்⁴ராந்திமநுதா⁴வந்தி கோரஹஸ்ய து³ர்ம்முக²த்வேந விநஸ்²யந்தி ச|
12 ೧೨ ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, ನಿಮ್ಮ ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, ಸಂಪೂರ್ಣವಾಗಿ ಸತ್ತ, ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.
யுஷ்மாகம்’ ப்ரேமபோ⁴ஜ்யேஷு தே விக்⁴நஜநகா ப⁴வந்தி, ஆத்மம்ப⁴ரயஸ்²ச பூ⁴த்வா நிர்லஜ்ஜயா யுஷ்மாபி⁴​: ஸார்த்³த⁴ம்’ பு⁴ஞ்ஜதே| தே வாயுபி⁴ஸ்²சாலிதா நிஸ்தோயமேகா⁴ ஹேமந்தகாலிகா நிஷ்ப²லா த்³வி ர்ம்ரு’தா உந்மூலிதா வ்ரு’க்ஷா​: ,
13 ೧೩ ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ. (aiōn g165)
ஸ்வகீயலஜ்ஜாபே²ணோத்³வமகா​: ப்ரசண்டா³​: ஸாமுத்³ரதரங்கா³​: ஸதா³காலம்’ யாவத் கோ⁴ரதிமிரபா⁴கீ³நி ப்⁴ரமணகாரீணி நக்ஷத்ராணி ச ப⁴வந்தி| (aiōn g165)
14 ೧೪ ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,
ஆத³மத​: ஸப்தம​: புருஷோ யோ ஹநோக​: ஸ தாநுத்³தி³ஸ்²ய ப⁴விஷ்யத்³வாக்யமித³ம்’ கதி²தவாந், யதா², பஸ்²ய ஸ்வகீயபுண்யாநாம் அயுதை ர்வேஷ்டித​: ப்ரபு⁴​: |
15 ೧೫ ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು” ಎಂಬುದಾಗಿ ಪ್ರವಾದಿಸಿದನು.
ஸர்வ்வாந் ப்ரதி விசாராஜ்ஞாஸாத⁴நாயாக³மிஷ்யதி| ததா³ சாதா⁴ர்ம்மிகா​: ஸர்வ்வே ஜாதா யைரபராதி⁴ந​: | வித⁴ர்ம்மகர்ம்மணாம்’ தேஷாம்’ ஸர்வ்வேஷாமேவ காரணாத்| ததா² தத்³வைபரீத்யேநாப்யத⁴ர்ம்மாசாரிபாபிநாம்’| உக்தகடோ²ரவாக்யாநாம்’ ஸர்வ்வேஷாமபி காரணாத்| பரமேஸே²ந தோ³ஷித்வம்’ தேஷாம்’ ப்ரகாஸ²யிஷ்யதே||
16 ೧೬ ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, ಬಂಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.
தே வாக்கலஹகாரிண​: ஸ்வபா⁴க்³யநிந்த³கா​: ஸ்வேச்சா²சாரிணோ த³ர்பவாதி³முக²விஸி²ஷ்டா லாபா⁴ர்த²ம்’ மநுஷ்யஸ்தாவகாஸ்²ச ஸந்தி|
17 ೧೭ ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
கிந்து ஹே ப்ரியதமா​: , அஸ்மாகம்’ ப்ரபோ⁴ ர்யீஸு²க்²ரீஷ்டஸ்ய ப்ரேரிதை ர்யத்³ வாக்யம்’ பூர்வ்வம்’ யுஷ்மப்⁴யம்’ கதி²தம்’ தத் ஸ்மரத,
18 ೧೮ “ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು.
ப²லத​: ஸே²ஷஸமயே ஸ்வேச்சா²தோ (அ)த⁴ர்ம்மாசாரிணோ நிந்த³கா உபஸ்தா²ஸ்யந்தீதி|
19 ೧೯ ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ.
ஏதே லோகா​: ஸ்வாந் ப்ரு’த²க் குர்வ்வந்த​: ஸாம்’ஸாரிகா ஆத்மஹீநாஸ்²ச ஸந்தி|
20 ೨೦ ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ.
கிந்து ஹே ப்ரியதமா​: , யூயம்’ ஸ்வேஷாம் அதிபவித்ரவிஸ்²வாஸே நிசீயமாநா​: பவித்ரேணாத்மநா ப்ரார்த²நாம்’ குர்வ்வந்த
21 ೨೧ ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. (aiōnios g166)
ஈஸ்²வரஸ்ய ப்ரேம்நா ஸ்வாந் ரக்ஷத, அநந்தஜீவநாய சாஸ்மாகம்’ ப்ரபோ⁴ ர்யீஸு²க்²ரீஷ்டஸ்ய க்ரு’பாம்’ ப்ரதீக்ஷத்⁴வம்’| (aiōnios g166)
22 ೨೨ ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ,
அபரம்’ யூயம்’ விவிச்ய காம்’ஸ்²சித்³ அநுகம்பத்⁴வம்’
23 ೨೩ ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.
காம்’ஸ்²சித்³ அக்³நித உத்³த்⁴ரு’த்ய ப⁴யம்’ ப்ரத³ர்ஸ்²ய ரக்ஷத, ஸா²ரீரிகபா⁴வேந கலங்கிதம்’ வஸ்த்ரமபி ரு’தீயத்⁴வம்’|
24 ೨೪ ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ,
அபரஞ்ச யுஷ்மாந் ஸ்க²லநாத்³ ரக்ஷிதும் உல்லாஸேந ஸ்வீயதேஜஸ​: ஸாக்ஷாத் நிர்த்³தோ³ஷாந் ஸ்தா²பயிதுஞ்ச ஸமர்தோ²
25 ೨೫ ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್. (aiōn g165)
யோ (அ)ஸ்மாகம் அத்³விதீயஸ்த்ராணகர்த்தா ஸர்வ்வஜ்ஞ ஈஸ்²வரஸ்தஸ்ய கௌ³ரவம்’ மஹிமா பராக்ரம​: கர்த்ரு’த்வஞ்சேதா³நீம் அநந்தகாலம்’ யாவத்³ பூ⁴யாத்| ஆமேந்| (aiōn g165)

< ಯೂದನು ಬರೆದ ಪತ್ರಿಕೆ 1 >