< ಯಾಕೋಬನು ಬರೆದ ಪತ್ರಿಕೆ 3 >
1 ೧ ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿಣವಾದ ತೀರ್ಪು ಆಗುವುದೆಂದು ತಿಳಿದುಕೊಂಡು ಬಹಳ ಜನರು ಬೋಧಕರಾಗಬೇಡಿರಿ.
ஹே மம ப்⁴ராதர: , ஸி²க்ஷகைரஸ்மாபி⁴ ர்கு³ருதரத³ண்டோ³ லப்ஸ்யத இதி ஜ்ஞாத்வா யூயம் அநேகே ஸி²க்ஷகா மா ப⁴வத|
2 ೨ ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುಮಾಡುವವರಾಗಿದ್ದಾರೆ. ಒಬ್ಬನು ಮಾತಿನಲ್ಲಿ ತಪ್ಪಿ ನಡೆಯದಿದ್ದರೆ ಅವನು ಸರ್ವಸುಗುಣವುಳ್ಳವನೂ ತನ್ನ ಇಡೀ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
யத: ஸர்வ்வே வயம்’ ப³ஹுவிஷயேஷு ஸ்க²லாம: , ய: கஸ்²சித்³ வாக்யே ந ஸ்க²லதி ஸ ஸித்³த⁴புருஷ: க்ரு’த்ஸ்நம்’ வஸீ²கர்த்தும்’ ஸமர்த²ஸ்²சாஸ்தி|
3 ೩ ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ.
பஸ்²யத வயம் அஸ்²வாந் வஸீ²கர்த்தும்’ தேஷாம்’ வக்த்ரேஷு க²லீநாந் நிதா⁴ய தேஷாம்’ க்ரு’த்ஸ்நம்’ ஸ²ரீரம் அநுவர்த்தயாம: |
4 ೪ ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ.
பஸ்²யத யே போதா அதீவ ப்³ரு’ஹதா³காரா: ப்ரசண்ட³வாதைஸ்²ச சாலிதாஸ்தே(அ)பி கர்ணதா⁴ரஸ்ய மநோ(அ)பி⁴மதாத்³ அதிக்ஷுத்³ரேண கர்ணேந வாஞ்சி²தம்’ ஸ்தா²நம்’ ப்ரத்யநுவர்த்தந்தே|
5 ೫ ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ.
தத்³வத்³ ரஸநாபி க்ஷுத்³ரதராங்க³ம்’ ஸந்தீ த³ர்பவாக்யாநி பா⁴ஷதே| பஸ்²ய கீத்³ரு’ங்மஹாரண்யம்’ த³ஹ்யதே (அ)ல்பேந வஹ்நிநா|
6 ೬ ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ. (Geenna )
ரஸநாபி ப⁴வேத்³ வஹ்நிரத⁴ர்ம்மரூபபிஷ்டபே| அஸ்மத³ங்கே³ஷு ரஸநா தாத்³ரு’ஸ²ம்’ ஸந்திஷ்ட²தி ஸா க்ரு’த்ஸ்நம்’ தே³ஹம்’ கலங்கயதி ஸ்ரு’ஷ்டிரத²ஸ்ய சக்ரம்’ ப்ரஜ்வலயதி நரகாநலேந ஜ்வலதி ச| (Geenna )
7 ೭ ಸಕಲ ಜಾತಿಯ ಮೃಗ, ಪಕ್ಷಿ, ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು.
பஸு²பக்ஷ்யுரோக³ஜலசராணாம்’ ஸர்வ்வேஷாம்’ ஸ்வபா⁴வோ த³மயிதும்’ ஸ²க்யதே மாநுஷிகஸ்வபா⁴வேந த³மயாஞ்சக்ரே ச|
8 ೮ ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿದೆ.
கிந்து மாநவாநாம்’ கேநாபி ஜிஹ்வா த³மயிதும்’ ந ஸ²க்யதே ஸா ந நிவார்ய்யம் அநிஷ்டம்’ ஹலாஹலவிஷேண பூர்ணா ச|
9 ೯ ಅದೇ ನಾಲಿಗೆಯಿಂದ ನಮ್ಮ ಕರ್ತನಾದ ತಂದೆಯನ್ನು ಕೊಂಡಾಡುತ್ತೇವೆ, ಅದುದರಿಂದಲೇ ದೇವರ ಹೋಲಿಕೆಗೆ ಸಮಾನವಾಗಿ ಸೃಷ್ಟಿಸಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ.
தயா வயம்’ பிதரம் ஈஸ்²வரம்’ த⁴ந்யம்’ வதா³ம: , தயா சேஸ்²வரஸ்ய ஸாத்³ரு’ஸ்²யே ஸ்ரு’ஷ்டாந் மாநவாந் ஸ²பாம: |
10 ೧೦ ಅದೇ ಬಾಯಿಂದ ಸ್ತುತಿ ಮತ್ತು ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ,
ஏகஸ்மாத்³ வத³நாத்³ த⁴ந்யவாத³ஸா²பௌ நிர்க³ச்ச²த: | ஹே மம ப்⁴ராதர: , ஏதாத்³ரு’ஸ²ம்’ ந கர்த்தவ்யம்’|
11 ೧೧ ಒಂದೇ ಬುಗ್ಗೆಯಿಂದ ಸಿಹಿ ನೀರು ಮತ್ತು ಕಹಿ ನೀರು ಎರಡು ಹೊರಡುವುದುಂಟೇ?
ப்ரஸ்ரவண: கிம் ஏகஸ்மாத் சி²த்³ராத் மிஷ்டம்’ திக்தஞ்ச தோயம்’ நிர்க³மயதி?
12 ೧೨ ನನ್ನ ಸಹೋದರರೇ, ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದೋ? ದ್ರಾಕ್ಷಿ ಬಳ್ಳಿಯಲ್ಲಿ ಅಂಜೂರದ ಹಣ್ಣು ಬಿಡುವುದೋ? ಹಾಗೆಯೇ ಉಪ್ಪುನೀರಿನ ಬುಗ್ಗೆಯಿಂದ ಸಿಹಿ ನೀರು ಬರುವುದಿಲ್ಲ.
ஹே மம ப்⁴ராதர: , உடு³ம்ப³ரதரு: கிம்’ ஜிதப²லாநி த்³ராக்ஷாலதா வா கிம் உடு³ம்ப³ரப²லாநி ப²லிதும்’ ஸ²க்நோதி? தத்³வத்³ ஏக: ப்ரஸ்ரவணோ லவணமிஷ்டே தோயே நிர்க³மயிதும்’ ந ஸ²க்நோதி|
13 ೧೩ ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು ಒಳ್ಳೆಯ ನಡತೆಯಿಂದ, ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ.
யுஷ்மாகம்’ மத்⁴யே ஜ்ஞாநீ ஸுபோ³த⁴ஸ்²ச க ஆஸ்தே? தஸ்ய கர்ம்மாணி ஜ்ஞாநமூலகம்ரு’து³தாயுக்தாநீதி ஸதா³சாராத் ஸ ப்ரமாணயது|
14 ೧೪ ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.
கிந்து யுஷ்மத³ந்த: கரணமத்⁴யே யதி³ திக்தேர்ஷ்யா விவாதே³ச்சா² ச வித்³யதே தர்ஹி ஸத்யமதஸ்ய விருத்³த⁴ம்’ ந ஸ்²லாக⁴த்⁴வம்’ நசாந்ரு’தம்’ கத²யத|
15 ೧೫ ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು.
தாத்³ரு’ஸ²ம்’ ஜ்ஞாநம் ஊர்த்³த்⁴வாத்³ ஆக³தம்’ நஹி கிந்து பார்தி²வம்’ ஸ²ரீரி பௌ⁴திகஞ்ச|
16 ೧೬ ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು.
யதோ ஹேதோரீர்ஷ்யா விவாதே³ச்சா² ச யத்ர வேத்³யேதே தத்ரைவ கலஹ: ஸர்வ்வம்’ து³ஷ்க்ரு’தஞ்ச வித்³யதே|
17 ೧೭ ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.
கிந்தூர்த்³த்⁴வாத்³ ஆக³தம்’ யத் ஜ்ஞாநம்’ தத் ப்ரத²மம்’ ஸு²சி தத: பரம்’ ஸா²ந்தம்’ க்ஷாந்தம் ஆஸு²ஸந்தே⁴யம்’ த³யாதி³ஸத்ப²லை: பரிபூர்ணம் அஸந்தி³க்³த⁴ம்’ நிஷ்கபடஞ்ச ப⁴வதி|
18 ೧೮ ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.
ஸா²ந்த்யாசாரிபி⁴: ஸா²ந்த்யா த⁴ர்ம்மப²லம்’ ரோப்யதே|