< ಇಬ್ರಿಯರಿಗೆ ಬರೆದ ಪತ್ರಿಕೆ 2 >
1 ೧ ಆದ್ದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋಗದಂತೆ ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.
அதோ வயம்’ யத்³ ப்⁴ரமஸ்ரோதஸா நாபநீயாமஹே தத³ர்த²மஸ்மாபி⁴ ர்யத்³யத்³ அஸ்²ராவி தஸ்மிந் மநாம்’ஸி நிதா⁴தவ்யாநி|
2 ೨ ಯಾಕೆಂದರೆ, ದೇವದೂತರ ಮೂಲಕ ಹೇಳಲ್ಪಟ್ಟ ಸಂದೇಶವು ಸ್ಥಿರವಾಗಿರಲು, ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಮತ್ತು ಅವಿಧೇಯತ್ವಕ್ಕೂ ಶಿಕ್ಷಾರ್ಹವಾದ ಪ್ರತಿಫಲ ಹೊಂದಿದ್ದರು.
யதோ ஹேதோ தூ³தை: கதி²தம்’ வாக்யம்’ யத்³யமோக⁴ம் அப⁴வத்³ யதி³ ச தல்லங்க⁴நகாரிணே தஸ்யாக்³ராஹகாய ச ஸர்வ்வஸ்மை ஸமுசிதம்’ த³ண்ட³ம் அதீ³யத,
3 ೩ ನಮ್ಮ ಮುಂದಿಟ್ಟಿರುವ ಈ ಅತ್ಯಂತ ಶ್ರೇಷ್ಠವಾದ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು ಮತ್ತು ಆತನಿಂದ ಕೇಳಿದವರು ಇದನ್ನು ನಮಗೆ ದೃಢಪಡಿಸಿಕೊಟ್ಟರು.
தர்ஹ்யஸ்மாபி⁴ஸ்தாத்³ரு’ஸ²ம்’ மஹாபரித்ராணம் அவஜ்ஞாய கத²ம்’ ரக்ஷா ப்ராப்ஸ்யதே, யத் ப்ரத²மத: ப்ரபு⁴நா ப்ரோக்தம்’ ததோ(அ)ஸ்மாந் யாவத் தஸ்ய ஸ்²ரோத்ரு’பி⁴: ஸ்தி²ரீக்ரு’தம்’,
4 ೪ ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು.
அபரம்’ லக்ஷணைரத்³பு⁴தகர்ம்மபி⁴ ர்விவித⁴ஸ²க்திப்ரகாஸே²ந நிஜேச்சா²த: பவித்ரஸ்யாத்மநோ விபா⁴கே³ந ச யத்³ ஈஸ்²வரேண ப்ரமாணீக்ரு’தம் அபூ⁴த்|
5 ೫ ನಾವು ಪ್ರಸ್ತಾಪಿಸುತ್ತಿರುವ ಭವಿಷ್ಯತ್ತಿನ ಲೋಕವನ್ನು ದೇವರು ತನ್ನ ದೇವದೂತರಿಗೆ ಅಧೀನ ಮಾಡಿಕೊಡಲಿಲ್ಲ.
வயம்’ து யஸ்ய பா⁴விராஜ்யஸ்ய கதா²ம்’ கத²யாம: , தத் தேந் தி³வ்யதூ³தாநாம் அதீ⁴நீக்ரு’தமிதி நஹி|
6 ೬ “ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಪಿಸಿಕೊಳ್ಳಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?
கிந்து குத்ராபி கஸ்²சித் ப்ரமாணம் ஈத்³ரு’ஸ²ம்’ த³த்தவாந், யதா², "கிம்’ வஸ்து மாநவோ யத் ஸ நித்யம்’ ஸம்’ஸ்மர்ய்யதே த்வயா| கிம்’ வா மாநவஸந்தாநோ யத் ஸ ஆலோச்யதே த்வயா|
7 ೭ ನೀನು ಮನುಷ್ಯನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಉಂಟುಮಾಡಿದ್ದಿಯಲ್ಲಾ. ಮಹಿಮೆಯನ್ನೂ ಗೌರವವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
தி³வ்யத³தக³ணேப்⁴ய: ஸ கிஞ்சிந் ந்யூந: க்ரு’தஸ்த்வயா| தேஜோகௌ³ரவரூபேண கிரீடேந விபூ⁴ஷித: | ஸ்ரு’ஷ்டம்’ யத் தே கராப்⁴யாம்’ ஸ தத்ப்ரபு⁴த்வே நியோஜித: |
8 ೮ ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ” ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ.
சரணாத⁴ஸ்²ச தஸ்யைவ த்வயா ஸர்வ்வம்’ வஸீ²க்ரு’தம்’|| " தேந ஸர்வ்வம்’ யஸ்ய வஸீ²க்ரு’தம்’ தஸ்யாவஸீ²பூ⁴தம்’ கிமபி நாவஸே²ஷிதம்’ கிந்த்வது⁴நாபி வயம்’ ஸர்வ்வாணி தஸ்ய வஸீ²பூ⁴தாநி ந பஸ்²யாம: |
9 ೯ ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟವನಾದ ಯೇಸು ಬಾಧೆಯನ್ನುಭವಿಸಿ ಮೃತಪಟ್ಟದ್ದರಿಂದಲೇ ಮಹಿಮೆಯನ್ನೂ ಗೌರವವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ದೇವರ ಕೃಪೆಯಿಂದ ಯೇಸು ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದ್ದಾನೆ.
ததா²பி தி³வ்யதூ³தக³ணேப்⁴யோ ய: கிஞ்சிந் ந்யூநீக்ரு’தோ(அ)ப⁴வத் தம்’ யீஸு²ம்’ ம்ரு’த்யுபோ⁴க³ஹேதோஸ்தேஜோகௌ³ரவரூபேண கிரீடேந விபூ⁴ஷிதம்’ பஸ்²யாம: , யத ஈஸ்²வரஸ்யாநுக்³ரஹாத் ஸ ஸர்வ்வேஷாம்’ க்ரு’தே ம்ரு’த்யும் அஸ்வத³த|
10 ೧೦ ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು.
அபரஞ்ச யஸ்மை யேந ச க்ரு’த்ஸ்நம்’ வஸ்து ஸ்ரு’ஷ்டம்’ வித்³யதே ப³ஹுஸந்தாநாநாம்’ விப⁴வாயாநயநகாலே தேஷாம்’ பரித்ராணாக்³ரஸரஸ்ய து³: க²போ⁴கே³ந ஸித்³தீ⁴கரணமபி தஸ்யோபயுக்தம் அப⁴வத்|
11 ೧೧ ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ.
யத: பாவக: பூயமாநாஸ்²ச ஸர்வ்வே ஏகஸ்மாதே³வோத்பந்நா ப⁴வந்தி, இதி ஹேதோ: ஸ தாந் ப்⁴ராத்ரு’ந் வதி³தும்’ ந லஜ்ஜதே|
12 ೧೨ “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ,
தேந ஸ உக்தவாந், யதா², "த்³யோதயிஷ்யாமி தே நாம ப்⁴ராத்ரு’ணாம்’ மத்⁴யதோ மம| பரந்து ஸமிதே ர்மத்⁴யே கரிஷ்யே தே ப்ரஸ²ம்’ஸநம்’|| "
13 ೧೩ “ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ.
புநரபி, யதா², "தஸ்மிந் விஸ்²வஸ்ய ஸ்தா²தாஹம்’| " புநரபி, யதா², "பஸ்²யாஹம் அபத்யாநி ச த³த்தாநி மஹ்யம் ஈஸ்²வராத்| "
14 ೧೪ ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ,
தேஷாம் அபத்யாநாம்’ ருதி⁴ரபலலவிஸி²ஷ்டத்வாத் ஸோ(அ)பி தத்³வத் தத்³விஸி²ஷ்டோ(அ)பூ⁴த் தஸ்யாபி⁴ப்ராயோ(அ)யம்’ யத் ஸ ம்ரு’த்யுப³லாதி⁴காரிணம்’ ஸ²யதாநம்’ ம்ரு’த்யுநா ப³லஹீநம்’ குர்ய்யாத்
15 ೧೫ ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು.
யே ச ம்ரு’த்யுப⁴யாத்³ யாவஜ்ஜீவநம்’ தா³ஸத்வஸ்ய நிக்⁴நா ஆஸந் தாந் உத்³தா⁴ரயேத்|
16 ೧೬ ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ.
ஸ தூ³தாநாம் உபகாரீ ந ப⁴வதி கிந்த்விப்³ராஹீமோ வம்’ஸ²ஸ்யைவோபகாரீ ப⁴வதீ|
17 ೧೭ ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು.
அதோ ஹேதோ: ஸ யதா² க்ரு’பாவாந் ப்ரஜாநாம்’ பாபஸோ²த⁴நார்த²ம் ஈஸ்²வரோத்³தே³ஸ்²யவிஷயே விஸ்²வாஸ்யோ மஹாயாஜகோ ப⁴வேத் தத³ர்த²ம்’ ஸர்வ்வவிஷயே ஸ்வப்⁴ராத்ரு’ணாம்’ ஸத்³ரு’ஸீ²ப⁴வநம்’ தஸ்யோசிதம் ஆஸீத்|
18 ೧೮ ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.
யத: ஸ ஸ்வயம்’ பரீக்ஷாம்’ க³த்வா யம்’ து³: க²போ⁴க³ம் அவக³தஸ்தேந பரீக்ஷாக்ராந்தாந் உபகர்த்தும்’ ஸ²க்நோதி|