< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 27 >

1 ಇಸ್ರಾಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳೂ, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳ ವಿವರ: ವರ್ಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರದಿಯ ಪ್ರಕಾರ ಕೆಲಸಕ್ಕಾಗಿ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು ಇದ್ದರು.
इस्राएलियों की गिनती, अर्थात् पितरों के घरानों के मुख्य-मुख्य पुरुषों और सहस्त्रपतियों और शतपतियों और उनके सरदारों की गिनती जो वर्ष भर के महीने-महीने उपस्थित होने और छुट्टी पानेवाले दलों के थे और सब विषयों में राजा की सेवा टहल करते थे, एक-एक दल में चौबीस हजार थे।
2 ಪೆರೆಚನ ಸಂತಾನದವನೂ, ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕನು.
पहले महीने के लिये पहले दल का अधिकारी जब्दीएल का पुत्र याशोबाम नियुक्त हुआ; और उसके दल में चौबीस हजार थे।
3 ಇವನು ಮೊದಲನೆಯ ತಿಂಗಳಿನ ಸೈನ್ಯಾಧಿಪತಿಯ ಮುಖ್ಯಸ್ಥನು. ಮೊದಲನೆಯ ತಿಂಗಳಿನಲ್ಲಿ ಸೇವೆ ಮಾಡತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
वह पेरेस के वंश का था और पहले महीने में सब सेनापतियों का अधिकारी था।
4 ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕನು. ಆ ವರ್ಗದಲ್ಲಿ ಮಿಕ್ಲೋತನೆಂಬವನು ನಾಯಕನು. ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
दूसरे महीने के दल का अधिकारी दोदै नामक एक अहोही था, और उसके दल का प्रधान मिक्लोत था, और उसके दल में चौबीस हजार थे।
5 ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕನು. ಮೂರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
तीसरे महीने के लिये तीसरा सेनापति यहोयादा याजक का पुत्र बनायाह था और उसके दल में चौबीस हजार थे।
6 ಈ ಬೆನಾಯನು ಮೂವತ್ತು ಜನರಲ್ಲಿ ಪ್ರಸಿದ್ಧನಾದ ಯುದ್ಧವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನು ಇದ್ದನು.
यह वही बनायाह है, जो तीसों शूरों में वीर, और तीसों में श्रेष्ठ भी था; और उसके दल में उसका पुत्र अम्मीजाबाद था।
7 ಯೋವಾಬನ ತಮ್ಮನಾದ ಅಸಾಹೇಲನು. ಅವನು ಸತ್ತ ನಂತರ ಅವನ ಮಗನಾದ ಜೆಬದ್ಯನು ನಾಲ್ಕನೆಯ ವರ್ಗದ ನಾಯಕನು. ನಾಲ್ಕನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
चौथे महीने के लिये चौथा सेनापति योआब का भाई असाहेल था, और उसके बाद उसका पुत्र जबद्याह था और उसके दल में चौबीस हजार थे।
8 ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕನು. ಐದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
पाँचवें महीने के लिये पाँचवाँ सेनापति यिज्राही शम्हूत था और उसके दल में चौबीस हजार थे।
9 ತೆಕೋವಿನ ಇಕ್ಕೇಷನ ಮಗನಾದ ಈರ ಎಂಬುವನು ಆರನೆಯ ವರ್ಗದ ನಾಯಕನು. ಆರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
छठवें महीने के लिये छठवाँ सेनापति तकोई इक्केश का पुत्र ईरा था और उसके दल में चौबीस हजार थे।
10 ೧೦ ಎಫ್ರಾಯೀಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕನು. ಏಳನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
१०सातवें महीने के लिये सातवाँ सेनापति एप्रैम के वंश का हेलेस पलोनी था और उसके दल में चौबीस हजार थे।
11 ೧೧ ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕನು. ಎಂಟನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
११आठवें महीने के लिये आठवाँ सेनापति जेरह के वंश में से हूशाई सिब्बकै था और उसके दल में चौबीस हजार थे।
12 ೧೨ ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಬತ್ತನೆಯ ವರ್ಗದ ನಾಯಕನು. ಒಂಬತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
१२नौवें महीने के लिये नौवाँ सेनापति बिन्यामीनी अबीएजेर अनातोतवासी था और उसके दल में चौबीस हजार थे।
13 ೧೩ ನೆಟೋಫ ಊರಿನವನಾದ ಜೆರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕನು. ಹತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
१३दसवें महीने के लिये दसवाँ सेनापति जेरही महरै नतोपावासी था और उसके दल में चौबीस हजार थे।
14 ೧೪ ಎಫ್ರಾಯೀಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕನು. ಹನ್ನೊಂದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
१४ग्यारहवें महीने के लिये ग्यारहवाँ सेनापति एप्रैम के वंश का बनायाह पिरातोनवासी था और उसके दल में चौबीस हजार थे।
15 ೧೫ ನೆಟೋಫ ಊರಿನವನಾದ ಒತ್ನೀಯೇಲನ ಸಂತಾನದವನಾದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕನು. ಹನ್ನೆರಡನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
१५बारहवें महीने के लिये बारहवाँ सेनापति ओत्नीएल के वंश का हेल्दै नतोपावासी था और उसके दल में चौबीस हजार थे।
16 ೧೬ ಇಸ್ರಾಯೇಲಿನ ಕುಲ ಪ್ರಭುಗಳು: ರೂಬೇನ್ಯರಲ್ಲಿ ಜಿಕ್ರೀಯ ಮಗನಾದ ಎಲೀಯೆಜೆರನು; ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಪಟ್ಯನು;
१६फिर इस्राएली गोत्रों के ये अधिकारी थे: अर्थात् रूबेनियों का प्रधान जिक्री का पुत्र एलीएजेर; शिमोनियों से माका का पुत्र शपत्याह;
17 ೧೭ ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ; ಆರೋನ್ಯರಲ್ಲಿ ಚಾದೋಕ್;
१७लेवी से कमूएल का पुत्र हशब्याह; हारून की सन्तान का सादोक;
18 ೧೮ ಯೆಹೂದ್ಯರಲ್ಲಿ ದಾವೀದನ ಅಣ್ಣನಾದ ಎಲೀಹು; ಇಸ್ಸಾಕಾರ್ಯರಲ್ಲಿ ಮೀಕಾಯೇಲನ ಮಗನಾದ ಒಮ್ರಿ;
१८यहूदा का एलीहू नामक दाऊद का एक भाई, इस्साकार से मीकाएल का पुत्र ओम्री;
19 ೧೯ ಜೆಬುಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ; ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್;
१९जबूलून से ओबद्याह का पुत्र यिशमायाह, नप्ताली से अज्रीएल का पुत्र यरीमोत;
20 ೨೦ ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯ; ಮನಸ್ಸೆಯ ಅರ್ಧ ಕುಲದವರಲ್ಲಿ ಪೆದಾಯನ ಮಗನಾದ ಯೋವೇಲ್;
२०एप्रैम से अजज्याह का पुत्र होशे, मनश्शे से आधे गोत्र का, पदायाह का पुत्र योएल;
21 ೨೧ ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಕುಲದವರಲ್ಲಿ ಜೆಕರ್ಯಯನ ಮಗನಾದ ಇದ್ದೋ; ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗನಾದ ಯಗಸೀಯೇಲ್;
२१गिलाद में आधे गोत्र मनश्शे से जकर्याह का पुत्र इद्दो, बिन्यामीन से अब्नेर का पुत्र यासीएल;
22 ೨೨ ದಾನ್ಯರಲ್ಲಿ ಯೆರೋಹಾಮನ ಮಗನಾದ ಅಜರೇಲನು ಇವರೇ.
२२और दान से यरोहाम का पुत्र अजरेल प्रधान ठहरा। ये ही इस्राएल के गोत्रों के हाकिम थे।
23 ೨೩ ಇಸ್ರಾಯೇಲರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂಬುದಾಗಿ ಯೆಹೋವನು ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳವರನ್ನು ಪರಿಗಣಿಸಲಿಲ್ಲ.
२३परन्तु दाऊद ने उनकी गिनती बीस वर्ष की अवस्था के नीचे न की, क्योंकि यहोवा ने इस्राएल की गिनती आकाश के तारों के बराबर बढ़ाने के लिये कहा था।
24 ೨೪ ಚೆರೂಯಳ ಮಗನಾದ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ, ಇದರ ನಿಮಿತ್ತ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾದ್ದರಿಂದ ಅದನ್ನು ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಈ ಜನಗಣತಿಯು ದಾವೀದನ ರಾಜ್ಯದ ವೃತ್ತಾಂತ ಗ್ರಂಥದಲ್ಲಿ ಲಿಖಿತವಾಗಲಿಲ್ಲ.
२४सरूयाह का पुत्र योआब गिनती लेने लगा, पर निपटा न सका क्योंकि परमेश्वर का क्रोध इस्राएल पर भड़का, और यह गिनती राजा दाऊद के इतिहास में नहीं लिखी गई।
25 ೨೫ ಅರಸನಾದ ದಾವೀದನ ಸೊತ್ತಿನ ಮೇಲೆ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟವರು ಯಾರೆಂದರೆ: ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗನಾದ ಅಜ್ಮಾವೆತ್, ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಹಳ್ಳಿಗಳಲ್ಲಿಯೂ, ಬುರುಜಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗನಾದ ಯೋನಾತಾನನು,
२५फिर अदीएल का पुत्र अज्मावेत राज भण्डारों का अधिकारी था, और देहात और नगरों और गाँवों और गढ़ों के भण्डारों का अधिकारी उज्जियाह का पुत्र यहोनातान था।
26 ೨೬ ಹೊಲಗಳನ್ನು ವ್ಯವಸಾಯ ಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ,
२६और जो भूमि को जोतकर बोकर खेती करते थे, उनका अधिकारी कलूब का पुत्र एज्री था।
27 ೨೭ ದ್ರಾಕ್ಷಿ ತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ, ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ,
२७और दाख की बारियों का अधिकारी रामाई शिमी और दाख की बारियों की उपज जो दाखमधु के भण्डारों में रखने के लिये थी, उसका अधिकारी शापामी जब्दी था।
28 ೨೮ ಎಣ್ಣೇ ಮರದ ತೋಪುಗಳ ಮೇಲೆಯೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆಯೂ ಗೆದೇರಾ ಊರಿನವನಾದ ಬಾಳ್ಹಾನಾನ್ ಮತ್ತು ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್,
२८और नीचे के देश के जैतून और गूलर के वृक्षों का अधिकारी गदेरी बाल्हानान था और तेल के भण्डारों का अधिकारी योआश था।
29 ೨೯ ಶಾರೋನಿನಲ್ಲಿ ಮೇಯುವ ಹಸುಗಳ ಮೇಲೆ ಶಾರೋನ್ಯನಾದ ಶಿಟ್ರೈ, ತಗ್ಗುಗಳಲ್ಲಿ ಮೇಯುವ ಹಸುಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು,
२९और शारोन में चरनेवाले गाय-बैलों का अधिकारी शारोनी शित्रै था और तराइयों के गाय-बैलों का अधिकारी अदलै का पुत्र शापात था।
30 ೩೦ ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್, ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ,
३०और ऊँटों का अधिकारी इश्माएली ओबील और गदहियों का अधिकारी मेरोनोतवासी येहदयाह।
31 ೩೧ ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್.
३१और भेड़-बकरियों का अधिकारी हग्री याजीज था। ये ही सब राजा दाऊद की धन-सम्पत्ति के अधिकारी थे।
32 ೩೨ ವಿವೇಕಿಯೂ, ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು, ಮಂತ್ರಿಯೂ ಹಕ್ಮೋನಿಯ ಮಗನಾದ ಯೆಹೀಯೇಲನು ರಾಜಪುತ್ರಪಾಲಕನೂ ಆಗಿದ್ದರು.
३२और दाऊद का भतीजा योनातान एक समझदार मंत्री और शास्त्री था, और एक हक्मोनी का पुत्र यहीएल राजपुत्रों के संग रहा करता था।
33 ೩೩ ಅಹೀತೋಫೆಲನು ಅರಸನ ಮಂತ್ರಿಯೂ, ಅರ್ಕೀಯನಾದ ಹೂಷೈಯು ಅವನ ಮಿತ್ರನಾಗಿದ್ದನು.
३३और अहीतोपेल राजा का मंत्री था, और एरेकी हूशै राजा का मित्र था।
34 ೩೪ ಬೆನಾಯನ ಮಗನಾದ ಯೆಹೋಯಾದಾವನೂ, ಎಬ್ಯಾತಾರನೂ, ಅಹೀತೋಫೆಲನ ಉತ್ತರಾಧಿಕಾರಿಗಳಾದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
३४और अहीतोपेल के बाद बनायाह का पुत्र यहोयादा और एब्यातार मंत्री ठहराए गए। और राजा का प्रधान सेनापति योआब था।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 27 >