< Ƙidaya 13 >

1 Ubangiji ya ce wa Musa,
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2 “Ka aiki waɗansu mutane zuwa ƙasar Kan’ana, wadda nake ba Isra’ilawa. Daga kowace kabila, ka aiki ɗaya daga cikin shugabanninta.”
“ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ನೀನು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳುಹಿಸಬೇಕು” ಎಂದು ಆಜ್ಞಾಪಿಸಿದನು.
3 Saboda haka bisa ga umarnin Ubangiji, Musa ya aike su daga Hamadan Faran. Dukansu kuwa shugabanni ne na Isra’ilawa.
ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಅರಣ್ಯದಿಂದ ಇಸ್ರಾಯೇಲರ ಮುಖ್ಯಸ್ಥರನ್ನು ಕಳುಹಿಸಿದನು.
4 Shugabannin kuwa su ne, Shammuwa ɗan Zakkur, daga kabilar Ruben;
ಅವರ ಹೆಸರುಗಳು ಯಾವುವೆಂದರೆ: ರೂಬೇನ್ ಕುಲದ ಜಕ್ಕೂರನ ಮಗನಾದ ಶಮ್ಮೂವ,
5 Shafat ɗan Hori, daga kabilar Simeyon;
ಸಿಮೆಯೋನ್ ಕುಲದ ಹೋರಿಯನ ಮಗನಾದ ಶಾಫಾಟ್,
6 Kaleb ɗan Yefunne, daga kabilar Yahuda;
ಯೆಹೂದ ಕುಲದ ಯೆಫುನ್ನೆಯನ ಮಗನಾದ ಕಾಲೇಬ್,
7 Igal ɗan Yusuf, daga kabilar Issakar;
ಇಸ್ಸಾಕಾರ್ ಕುಲದ ಯೋಸೇಫನ ಮಗನಾದ ಇಗಾಲ್,
8 Hosheya ɗan Nun, daga kabilar Efraim;
ಎಫ್ರಾಯೀಮ್ ಕುಲದ ನೂನನ ಮಗನಾದ ಹೋಶೇಯ,
9 daga kabilar Benyamin, Falti ɗan Rafu;
ಬೆನ್ಯಾಮೀನ್ ಕುಲದ ರಾಫೂವನ ಮಗನಾದ ಪಲ್ಟೀ,
10 Gaddiyel ɗan Sodi, daga kabilar Zebulun;
೧೦ಜೆಬುಲೂನ್ ಕುಲದ ಸೋದೀಯನ ಮಗನಾದ ಗದ್ದೀಯೇಲ್,
11 Gaddi ɗan Susi, daga kabilar Manasse (wata kabilar Yusuf);
೧೧ಯೋಸೇಫ್ ಅಂದರೆ ಮನಸ್ಸೆ ಕುಲದ ಸೂಸೀಯನ ಮಗನಾದ ಗದ್ದೀ,
12 Ammiyel ɗan Gemalli, daga kabilar Dan;
೧೨ದಾನ್ ಕುಲದ ಗೆಮಲ್ಲೀಯನ ಮಗನಾದ ಅಮ್ಮೀಯೇಲ್,
13 Setur ɗan Mika’ilu, daga kabilar Asher;
೧೩ಆಶೇರ್ ಕುಲದ ಮೀಕಾಯೇಲನ ಮಗನಾದ ಸೆತೂರ್,
14 Nabi ɗan Bofsi, daga kabilar Naftali;
೧೪ನಫ್ತಾಲಿ ಕುಲದ ವಾಪೆಸೀಯನ ಮಗನಾದ ನಹಬೀ,
15 Geyuwel ɗan Maki, daga kabilar Gad.
೧೫ಗಾದ್ ಕುಲದ ಮಾಕೀಯನ ಮಗನಾದ ಗೆಯೂವೇಲ್.
16 Waɗannan su ne sunayen mutanen da Musa ya aika su binciki ƙasar. (Sai Musa ya ba Hosheya ɗan Nun, suna Yoshuwa.)
೧೬ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.
17 Sa’ad da Musa ya aike su domin su binciki Kan’ana ya ce, “Ku haura, ku ratsa ta Negeb har zuwa ƙasar tudu.
೧೭ಕಾನಾನ್ ದೇಶದಲ್ಲಿ ಸಂಚರಿಸಿ ನೋಡುವುದಕ್ಕೆ ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದ ಮಾರ್ಗವಾಗಿ ಬೆಟ್ಟದ ಸೀಮೆಗೆ ಹತ್ತಿಹೋಗಿ ಆ ದೇಶದ ಸಂಗತಿಯನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು.
18 Ku ga yadda ƙasar take, ku ga ko mutanen da suke zama a can ƙarfafa ne, ko raunannu, ko su kima ne, ko kuma suna da yawa.
೧೮ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಜನರೋ ಅಥವಾ ಸ್ವಲ್ಪ ಜನರೋ,
19 Wace irin ƙasa ce suke zama a ciki, Mai kyau ce, ko mummuna? Waɗanne irin birane ne suke zama a ciki? Suna da katanga, ko babu?
೧೯ಅವರ ದೇಶವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಅವರ ಪಟ್ಟಣಗಳು ಪಾಳೆಯಗಳೋ ಅಥವಾ ಕೋಟೆಗಳೋ?
20 Yaya ƙasar take? Tana da wadata, ko babu? Akwai itatuwa, ko babu? Ku yi iya ƙoƙarinku ku ɗebo daga cikin albarkar ƙasar ku kawo.” (Lokacin farkon nunan inabi ne.)
೨೦ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.
21 Saboda haka suka haura, suka binciki ƙasar daga Hamadan Zin har zuwa Rehob, wajen Lebo Hamat.
೨೧ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.
22 Suka kuma haura ta Negeb, suka iso Hebron, inda Ahiman, da Sheshai, da Talmai, zuriyar Anak, suke zama. (An gina Hebron da shekara bakwai kafin a gina Zowan a Masar.)
೨೨ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು.
23 Da suka iso Kwarin Eshkol, sai suka yanko reshe guda na nonon inabi tare da’ya’yansa cunkus. Mutum biyu suka ɗauka shi rataye a sanda a kafaɗarsu, suka haɗa tare da rumman da kuma ɓaure.
೨೩ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು.
24 Sai aka kira wurin Kwarin Eshkol saboda nonon inabin da suka yi cunkus, wanda Isra’ilawa suka yanko a wurin.
೨೪ಇಸ್ರಾಯೇಲರು ಅಲ್ಲಿ ಆ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದಲೇ ಆ ಸ್ಥಳಕ್ಕೆ “ಎಷ್ಕೋಲ್” ಎಂದು ಹೆಸರು ಉಂಟಾಯಿತು.
25 A ƙarshen kwana arba’in sai suka komo daga bincikensu.
೨೫ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು.
26 Suka dawo wurin Musa, da Haruna, da dukan jama’ar Isra’ilawa, a Kadesh, a Hamadan Faran. A can suka ba da rahoton ga dukan taron da yake wurin, suka kuma nuna musu amfanin ƙasar.
೨೬ಆ ಮೇಲೆ ಪಾರಾನ್ ಅರಣ್ಯದಲ್ಲಿದ್ದ ಮೋಶೆ, ಆರೋನರು ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಕಾದೇಶಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ದೇಶದ ಹಣ್ಣುಗಳನ್ನು ತೋರಿಸಿದರು.
27 Suka ce wa Musa, “Mun je ƙasar da ka aike mu, ƙasar tana zub da madara da zuma! Ga kuma amfaninta.
೨೭ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ನಿಜವಾಗಿಯೂ ಹಾಲೂ ಮತ್ತು ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು.
28 Amma fa mazaunan can ɗin ƙarfafa ne, an kuma kewaye biranen da manya-manyan katanga. Mun kuma ga zuriyar Anak a can.
೨೮ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು.
29 Amalekawa suna zama a Negeb; Hittiyawa, Yebusiyawa da kuma Amoriyawa, suna zama ne a ƙasar tudu. Kan’aniyawa kuma suna zama kusa da teku da kuma a bakin Urdun.”
೨೯ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರು, ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ” ಎಂದು ತಿಳಿಸಿದರು.
30 Sai Kaleb ya sa mutane suka yi shiru a gaban Musa, sai ya ce, “Ya kamata mu tafi mu mallaki ƙasar, gama lalle za mu iya cinta.”
೩೦ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು.
31 Amma sauran mutanen da suka je tare da shi, suka ce, “Ba za mu iya kara da mutanen nan ba; sun fi mu ƙarfi.”
೩೧ಆದರೆ ಅವನ ಜೊತೆಯಲ್ಲಿ ಹೋದವರು, “ಆ ಜನರು ನಮಗಿಂತ ಬಲಿಷ್ಠರು; ಅವರನ್ನು ಜಯಿಸಲು ನಮಗೆ ಶಕ್ತಿಸಾಲುವುದಿಲ್ಲ” ಎಂದು ಹೇಳಿದರು.
32 Sai suka yaɗa labari marar kyau ga Isra’ilawa game da ƙasar da suka binciko. Suka ce, “Ƙasar da muka ratsa cikinta domin mu leƙi asirinta, tana cinye waɗanda suke zama a cikinta. Dukan mutanen da muka gani a wurin, ƙatti ne.
೩೨ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ. ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು.
33 Mun ga Nefilimawa a can (zuriyar Anak sun fito ne daga Nefilim). Sai muka ga kanmu kamar fāra ne kawai, haka kuwa muke a gare su.”
೩೩ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು” ಎಂದು ಹೇಳಿದರು.

< Ƙidaya 13 >