< 1 Kronická 1 >
೧ಆದಾಮನ ಸಂತಾನದವರು; ಸೇತ್, ಎನೋಷ್,
2 Kainan, Mahalaleel, Járed,
೨ಕೇನಾನ್, ಮಹಲಲೇಲ್, ಯೆರೆದ್,
3 Enoch, Matuzalém, Lámech,
೩ಹನೋಕ್, ಮೆತೂಷೆಲಹ, ಲೆಮೆಕ್,
4 Noé, Sem, Cham a Jáfet.
೪ನೋಹ, ಶೇಮ್, ಹಾಮ್, ಯೆಫೆತ್ ಎಂಬವರು.
5 Synové Jáfetovi: Gomer, Magog, Madai, Javan, Tubal, Mešech a Tiras.
೫ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು.
6 Synové pak Gomerovi: Ascenez, Difat a Togorma.
೬ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು.
7 Synové pak Javanovi: Elisa, Tarsis, Cetim a Rodanim.
೭ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು.
8 Synové Chamovi: Chus, Mizraim, Put a Kanán.
೮ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು.
9 A synové Chusovi: Sába, Evila, Sabata, Regma, Sabatacha. Synové pak Regmovi: Sába a Dedan.
೯ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು.
10 Zplodil také Chus Nimroda; ten počal mocným býti na zemi.
೧೦ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು.
11 Mizraim pak zplodil Ludim, Anamim, Laabim a Neftuim,
೧೧ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ,
12 Fetruzim také a Chasluim, (odkudž pošli Filistinští), a Kafturim.
೧೨ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು.
13 Kanán pak zplodil Sidona, prvorozeného svého, a Het,
೧೩ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು.
14 A Jebuzea, Amorea a Gergezea,
೧೪ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ,
15 A Hevea, Aracea a Sinea,
೧೫ಹಿವ್ವಿಯರೂ, ಅರ್ಕಿಯರೂ, ಸೀನಿಯರೂ,
16 A Aradia, Samarea a Amatea.
೧೬ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು.
17 Synové Semovi: Elam, Assur, Arfaxad, Lud, Aram, Hus a Hul, Geter a Mas.
೧೭ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.
18 A Arfaxad zplodil Sále, Sále pak zplodil Hebera.
೧೮ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು.
19 Heberovi pak narodili se dva synové, z nichž jednoho jméno Peleg, proto že za dnů jeho rozdělena byla země, jméno pak bratra jeho Jektan.
೧೯ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್.
20 Kterýžto Jektan zplodil Elmodada, Salefa, Azarmota a Járe,
೨೦ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,
21 A Adoráma, Uzala a Dikla,
೨೧ಹದೋರಾಮ್, ಊಜಾಲ್, ದಿಕ್ಲ,
22 A Ebale, Abimahele a Sebai,
೨೨ಎಬಾಲ್, ಅಬೀಮಾಯೇಲ್, ಶೆಬಾ,
23 A Ofira, Evila a Jobaba. Všickni ti byli synové Jektanovi.
೨೩ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು.
೨೪ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ,
27 Abram, ten jest Abraham.
೨೭ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು.
28 Synové Abrahamovi: Izák a Izmael.
೨೮ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.
29 Tito jsou rodové jejich: Prvorozený Izmaelův Nabajot, Cedar, Adbeel a Mabsan,
೨೯ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
30 Masma, Dumah, Massa, Hadad a Tema,
೩೦ಮಿಷ್ಮ, ದೂಮಾ, ಮಸ್ಸ, ಹದದ್, ತೇಮ,
31 Jetur, Nafis a Cedma. Ti jsou synové Izmaelovi.
೩೧ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು.
32 Synové pak Cetury, ženiny Abrahamovy: Ta porodila Zamrana, Jeksana, Madana, Madiana, Jezbocha a Suecha. Synové pak Jeksanovi: Sába a Dedan.
೩೨ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು.
33 Synové pak Madianovi: Efa, Efer, Enoch, Abida a Helda. Všickni ti synové Cetury.
೩೩ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು.
34 Zplodil tedy Abraham Izáka. Synové pak Izákovi: Ezau a Izrael.
೩೪ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.
35 Synové Ezau: Elifaz, Rahuel, Jehus, Jhelom a Kore.
೩೫ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ.
36 Synové Elifazovi: Teman, Omar, Sefi, Gatam, Kenaz a syn Tamny, totiž Amalech.
೩೬ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.
37 Synové Rahuelovi: Nahat, Zára, Samma a Méza.
೩೭ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.
38 Synové pak Seir: Lotan, Sobal, Sebeon, Ana, Dison, Eser a Dízan.
೩೮ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು.
39 Synové pak Lotanovi: Hori a Homam. Sestra pak Lotanova: Tamna.
೩೯ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ.
40 Synové Sobalovi: Alian, Manáhat, Ebal, Sefi a Onam. Synové pak Sebeonovi: Aia a Ana.
೪೦ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ.
41 Synové Anovi: Dison. A synové Disonovi: Hamran, Eseban, Jetran a Charan.
೪೧ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
42 Synové Eser: Balaan, Závan a Jakan. Synové Dízonovi: Hus a Aran.
೪೨ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
43 Tito pak jsou králové, kteříž kralovali v zemi Idumejské, prvé než kraloval který král z synů Izraelských: Béla syn Beorův, jehožto město jméno mělo Denaba.
೪೩ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.
44 A když umřel Béla, kraloval na místě jeho Jobab, syn Záre z Bozra.
೪೪ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.
45 A když umřel Jobab, kraloval místo něho Husam z země Temanské.
೪೫ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು.
46 A když umřel Husam, kraloval místo něho Adad syn Badadův, kterýž porazil Madianské v krajině Moábské; jehož město jméno mělo Avith.
೪೬ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
47 A když umřel Adad, kraloval na místě jeho Semla z Masreka.
೪೭ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
48 A když umřel Semla, kraloval místo něho Saul z Rohobot řeky.
೪೮ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
49 A když umřel Saul, kraloval místo něho Bálanan, syn Achoborův.
೪೯ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು.
50 A když umřel Bálanan, kraloval místo něho Adad, jehož město řečené Pahu; jméno pak ženy jeho Mehetabel, dcera Matredy, dcery Mezábovy.
೫೦ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು,
51 A když umřel Adad, byli vývodové Idumejští: Vývoda Tamna, vývoda Alja, vývoda Jetet,
೫೧ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್,
52 Vývoda Olibama, vývoda Ela, vývoda Finon,
೫೨ಒಹೋಲಿಬಾಮ, ಏಲ, ಪೀನೋನ್,
53 Vývoda Kenaz, vývoda Teman, vývoda Mabsar,
೫೩ಕೆನೆಜ್, ತೇಮಾನ್, ಮಿಬ್ಚಾರ್,
54 Vývoda Magdiel, vývoda Híram. Ti byli vývodové Idumejští.
೫೪ಮಗ್ದೀಯೇಲ್ ಮತ್ತು ಇರಾಮ್ ಇವರೇ.