< শমূয়েলের দ্বিতীয় বই 18 >
1 ১ পরে দায়ূদ নিজের সঙ্গীদেরকে গুনে তাদের উপরে সহস্রপতি ও শতপতিদেরকে নিযুক্ত করলেন৷
೧ತರುವಾಯ ಅರಸನಾದ ದಾವೀದನು ತನ್ನ ಬಳಿಯಲ್ಲಿ ಇದ್ದ ಸೈನಿಕರನ್ನು ಎಣಿಸಿ, ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಮತ್ತು ಶತಾಧಿಪತಿಗಳನ್ನು ನೇಮಿಸಿದನು.
2 ২ আর দায়ূদ যোয়াবের হাতে লোকদের তৃতীয় অংশ, যোয়াবের ভাই সরূয়ার ছেলে অবীশয়ের হাতে তৃতীয় অংশ এবং গাতীয় ইত্তয়ের হাতে তৃতীয় অংশ দিয়ে পাঠালেন৷ আর রাজা লোকদেরকে বললেন, “আমিও তোমাদের সঙ্গে যাবো৷”
೨ಅವನು ಸೈನ್ಯವನ್ನು ಮೂರು ಭಾಗ ಮಾಡಿ, ಒಂದು ಭಾಗವನ್ನು ಯೋವಾಬನಿಗೂ, ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ, ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ, “ನಾನು ನಿಮ್ಮೊಂದಿಗೆ ಬರುತ್ತೇನೆ” ಎಂದು ಹೇಳಿದನು.
3 ৩ কিন্তু লোকেরা বলল, “আপনি যাবেন না; কারণ যদি আমরা পালাই, তবে আমাদের বিষয় তারা মনে করবে না, আমাদের অর্ধেক লোক মারা গেলেও আমাদের বিষয় মনে করবে না; কিন্তু আপনি আমাদের দশ হাজারের সমান; তাই নগর থেকে আমাদের সাহায্য করার জন্য আপনি প্রস্তুত থাকলে ভালো হয়৷”
೩ಆಗ ಸೈನ್ಯದವರು ಅವನಿಗೆ, “ನೀನು ಬರಬಾರದು. ನಾವು ಸೋತು ಓಡಿಹೋದರೆ ಶತ್ರುಗಳು ಅದನ್ನು ಗಮನಿಸುವುದಿಲ್ಲ. ನಮ್ಮಲ್ಲಿ ಅರ್ಧ ಜನರು ಸತ್ತುಹೋದರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರಿಗಿರುವ ಬೆಲೆ ನಿನ್ನೊಬ್ಬನಿಗೆ ಉಂಟು. ನೀನು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯ ಮಾಡಬಹುದು” ಎಂದನು.
4 ৪ তখন রাজা তাদেরকে বললেন, “তোমরা যা ভালো বোঝো, আমি তাই করব৷” পরে রাজা নগরের ফটকের পাশে দাঁড়িয়ে থাকলেন এবং সমস্ত লোক শত শত ও হাজার হাজার হয়ে বেরিয়ে গেল৷
೪ಅರಸನು ಅವರಿಗೆ, “ನಿಮಗೆ ಸರಿಕಂಡ ಹಾಗೆ ಮಾಡುತ್ತೇನೆ” ಎಂದು ಹೇಳಿ ಊರಬಾಗಿಲಿನ ಒಂದು ಕಡೆಯಲ್ಲಿ ನಿಂತನು. ಸೈನಿಕರು ನೂರು ನೂರು ಮಂದಿಯಾಗಿಯೂ, ಸಾವಿರ ಸಾವಿರ ಮಂದಿಯಾಗಿಯೂ ಹೊರಟರು.
5 ৫ তখন রাজা যোয়াব, অবীশয় ও ইত্তয়কে আদেশ দিয়ে বললেন, “তোমরা আমার অনুরোধে সেই যুবকের প্রতি, অবশালোমের প্রতি, নরম ব্যবহার কোরো৷” অবশালোমের বিষয় সমস্ত সেনাপতিকে দেওয়া রাজার এই আদেশ সবাই শুনল৷
೫ಅರಸನು ಯೋವಾಬ, ಅಬೀಷೈ ಮತ್ತು ಇತ್ತೈ ಎಂಬುವರಿಗೆ, “ನನಗೋಸ್ಕರವಾಗಿ ಯೌವನಸ್ಥನಾದ ಅಬ್ಷಾಲೋಮನಿಗೆ ದಯೆ ತೋರಿಸಿರಿ” ಎಂದು ಆಜ್ಞಾಪಿಸಿದನು. ದಾವೀದನು ಸೇನಾಧಿಪತಿಗಳಿಗೆ ಕೊಟ್ಟ ಈ ಅಪ್ಪಣೆಯು ಸೈನ್ಯದವರಿಗೆಲ್ಲಾ ಕೇಳಿಸಿತು.
6 ৬ পরে লোকেরা ইস্রায়েলের বিরুদ্ধে যুদ্ধের জায়গায় চলে গেল; ইফ্রয়িম বনে যুদ্ধ হল৷
೬ಅನಂತರ ಸೈನಿಕರು ಇಸ್ರಾಯೇಲರಿಗೆ ವಿರೋಧವಾಗಿ ಹೊರಟು ಬಯಲಿಗೆ ಬಂದರು. ಎಫ್ರಾಯೀಮಿನ ಕಾಡಿನಲ್ಲಿ ಯುದ್ಧವಾಯಿತು.
7 ৭ সেখানে ইস্রায়েলের লোকেরা দায়ূদের দাসদের সামনে আহত হল, আর সেদিন সেখানে বড় হত্যাকান্ড হল, কুড়ি হাজার লোক মারা গেল৷
೭ಇಸ್ರಾಯೇಲರು ದಾವೀದನ ಸೈನಿಕರಿಂದ ಪೂರ್ಣವಾಗಿ ಸೋಲಿಸಲ್ಪಟ್ಟರು. ಆ ದಿನ ಇಪ್ಪತ್ತು ಸಾವಿರ ಜನರು ಹತರಾದರು.
8 ৮ তার ফলে যুদ্ধ সেখানকার সমস্ত অঞ্চলে ছড়িয়ে গেল এবং সেই দিন তলোয়ার যত লোককে শেষ করল, বরং তার থেকে বেশি লোককে শেষ করল৷
೮ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಹತರಾದವರಿಗಿಂತ ಕಾಡಿನಲ್ಲಿ ಹತರಾದವರೇ ಹೆಚ್ಚಾಗಿದ್ದರು.
9 ৯ আর অবশালোম হঠাৎ দায়ূদের দাসেদের সামনে পড়ল; অবশালোম নিজের খচ্চরে চড়েছিল, সেই খচ্চর সেখানকার বড় একটা এলা গাছের ডালের নীচে দিয়ে যাওয়ার দিন সেই এলা গাছে অবশালোমের মাথা আটকে গেল; তাতে সে আকাশের ও পৃথিবীর মধ্যে ঝুলে রইল এবং যে খচ্চরটী তার নীচে ছিল, সেটি চলে গেল৷
೯ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಹೇಗೆಂದರೆ ಅವನು ಹತ್ತಿದ ಹೆಸರುಗತ್ತೆಯು ಒಂದು ದೊಡ್ಡ ದೇವದಾರು (ಕರ್ಪೂರತೈಲದ) ಮರದ ಕೆಳಗೆ ಹಾದುಹೋಗುವಾಗ ಅವನ ತಲೆಯ ಕೂದಲು ಒಂದು ದೊಡ್ಡದಾದ ಕೊಂಬೆಗೆ ಸಿಕ್ಕಿಕೊಂಡಿತು. ಹೇಸರಗತ್ತೆಯು ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನೇತಾಡುತ್ತಿದ್ದನು.
10 ১০ আর একটি লোক সেটা দেখে যোয়াবকে বলল, “দেখুন, আমি দেখলাম, অবশালোম এলা বৃক্ষে ঝুলছে৷”
೧೦ಇದನ್ನು ನೋಡಿದ ಒಬ್ಬ ಮನುಷ್ಯನು ಯೋವಾಬನಿಗೆ, “ಅಗೋ, ಆ ದೇವದಾರು ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆನು” ಎಂದು ಹೇಳಿದನು.
11 ১১ তখন যোয়াব সেই সংবাদদাতাকে বললেন, “দেখ, তুমি দেখেছিলে, তবে কেন সেই জায়গায় তাকে মেরে মাটিতে ফেলে দিলে না? সেটা করলে আমি তোমাকে দশ শেকল রূপা ও একটি কোমরবন্ধনী দিতাম৷”
೧೧ಯೋವಾಬನು ಅವನಿಗೆ, “ನೀನು ಕಂಡ ಕೂಡಲೆ ಯಾಕೆ ಅವನನ್ನು ಕಡಿದು ನೆಲಕ್ಕುರುಳಿಸಲಿಲ್ಲ? ಹಾಗೆ ಮಾಡಿದ್ದರೆ ನಾನು ನಿನಗೆ ಹತ್ತು ತಲಾಂತು ಬೆಳ್ಳಿಯನ್ನು, ಒಂದು ನಡುಕಟ್ಟನ್ನೂ ಕೊಡುತ್ತಿದ್ದೆನು” ಎಂದನು.
12 ১২ সেই ব্যক্তি যোয়াবকে বলল, আমি যদিও হাজার শেকল রূপা এই হাতে পেতাম, তবুও রাজপুত্রের বিরুদ্ধে হাত তুলতাম না; কারণ আমাদেরই কানের কাছে রাজা আপনাকে, অবীশয়কে ও ইত্তয়কে এই আদেশ দিয়েছিলেন, তোমরা যে কেউ হও, সেই যুবক অবশালোমের বিষয়ে সাবধান থাকবে৷
೧೨ಅದಕ್ಕೆ ಆ ಮನುಷ್ಯನು ಯೋವಾಬನಿಗೆ, “ನೀನು ನನ್ನ ಕೈಯಲ್ಲಿ ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟರೂ ನಾನು ಅರಸನ ಮಗನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಅರಸನು ನಮ್ಮೆಲ್ಲರಿಗೆ ಕೇಳಿಸುವಂತೆ ನಿನಗೂ, ಅಬೀಷೈಗೂ ಮತ್ತು ಇತ್ತೈಗೂ, ‘ಜಾಗರೂಕತೆಯಿಂದಿರಿ, ಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟಬಾರದು’ ಎಂದು ಆಜ್ಞಾಪಿಸಿದ್ದಾನಲ್ಲವೇ?
13 ১৩ আর যদি আমি তাঁর প্রাণের বিরুদ্ধে বিশাসঘাতকতা করতাম, রাজার থেকে তো কোন বিষয় লুকানো থাকে না তবে আপনি আমার বিপক্ষ হতেন৷
೧೩ನಾನು ಅವನ ಪ್ರಾಣಕ್ಕೆ ಅಪಾಯವನ್ನುಂಟುಮಾಡಿದರೆ ಅದು ಅರಸನಿಗೆ ತಿಳಿಯದೆ ಇರುವುದಿಲ್ಲ. ಆಗ ನೀನೂ ನನ್ನನ್ನು ಕೈಬಿಟ್ಟು ದೂರ ನಿಲ್ಲುವಿ” ಎಂದು ಉತ್ತರ ಕೊಟ್ಟನು.
14 ১৪ তখন যোয়াব বললেন, “তোমার সামনে আমার এরকম দেরী করা অনুচিত৷” পরে তিনি হাতে তিনটি খোঁচা নিয়ে অবশালোমের বুক বিদ্ধ করলেন; তখনও সে এলা গাছের মধ্যে জীবিত ছিল৷
೧೪ಆಗ ಯೋವಾಬನು, “ಇಲ್ಲಿ ನಿಂತು ತಡಮಾಡುವುದೇಕೆ” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ಅವನು ಇನ್ನೂ ಜೀವದಿಂದ ಓಕ್ ಮರದಲ್ಲಿ ನೇತಾಡುತ್ತಿರುವಾಗಲೇ
15 ১৫ আর যোয়াবের অস্ত্র বহনকারী দশ জন যুবক অবশালোমকে ঘিরে ধরল ও আঘাত করে হত্যা করল৷
೧೫ಯೋವಾಬನ ಆಯುಧಗಳನ್ನು ಹೊರುವ ಹತ್ತು ಮಂದಿ ಯೌವನಸ್ಥರು ಬಂದು ಅವನನ್ನು ಕೊಂದು ಹಾಕಿದರು.
16 ১৬ পরে যোয়াব তূরী বাজালেন, তাতে লোকেরা ইস্রায়েলের পিছনে তাড়া করা বন্ধ করল; কারণ যোয়াব লোকদেরকে ফিরিয়ে আনলেন৷
೧೬ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವುದಕ್ಕಾಗಿ ತುತ್ತೂರಿಯನ್ನು ಊದಿಸಲು ಸೈನ್ಯದವರೆಲ್ಲಾ ಇಸ್ರಾಯೇಲ್ಯರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಿರುಗಿದರು.
17 ১৭ আর তারা অবশালোমকে নিয়ে বনের এক বড় গর্তে ফেলে দিয়ে তার উপরে পাথরের এক বড় ঢিবি করলো৷ ইতিমধ্যে সমস্ত ইস্রায়েলীয় নিজেদের তাঁবুতে পালিয়ে গেল৷
೧೭ಅವರು ಅಬ್ಷಾಲೋಮನ ಶವವನ್ನು ಆ ಕಾಡಿನಲ್ಲಿದ್ದ ಒಂದು ದೊಡ್ಡ ಗುಂಡಿಯೊಳಗೆ ಹಾಕಿ ಅದರ ಮೇಲೆ ದೊಡ್ಡದಾದ ಕಲ್ಲು ಕುಪ್ಪೆಯನ್ನು ಮಾಡಿದರು. ಇಸ್ರಾಯೇಲ್ಯರಾದರೋ ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
18 ১৮ রাজার উপত্যকাতে যে স্তম্ভ আছে, অবশালোম জীবনকালে সেটা তৈরী করে নিজের জন্য স্থাপন করেছিল, কারণ সে বলেছিল, “আমার নাম রক্ষা করার জন্য আমার ছেলে নেই;” তাই সে নিজের নাম অনুসারে ঐ স্তম্ভের নাম রেখেছিল; আজ পর্যন্ত সেটা অবশালোমের স্তম্ভ বলে বিখ্যাত আছে৷
೧೮ಅಬ್ಷಾಲೋಮನು ಜೀವದಿಂದ ಇದ್ದಾಗ ತನ್ನ ಹೆಸರನ್ನುಳಿಸಲು ಮಗನಿಲ್ಲದೆ ಇದ್ದುದರಿಂದ ಒಂದು ಕಲ್ಲಿನ ಕಂಬವನ್ನು ತರಿಸಿ, ಅದನ್ನು ಅರಸನ ತಗ್ಗಿನಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಅದಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದು ಇಂದಿನ ವರೆಗೂ ಅಬ್ಷಾಲೋಮನ ಜ್ಞಾಪಕಸ್ತಂಭ ಎಂದು ಕರೆಯಲಾಗುತ್ತಿದೆ.
19 ১৯ পরে সাদোকের ছেলে অহীমাস বলল, “আমি দৌড়ে গিয়ে, সদাপ্রভু কি ভাবে রাজার শত্রুদেরহাত থেকে রাজাকে বাঁচিয়েছেন, এই খবর রাজাকে দিই৷”
೧೯ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಅಪ್ಪಣೆಯಾಗಲಿ ನಾನು ಅರಸನ ಬಳಿಗೆ ಓಡಿಹೋಗಿ ಯೆಹೋವನು ಅವನ ವೈರಿಗಳಿಗೆ ಮುಯ್ಯಿ ತೀರಿಸಿದ್ದಾನೆಂಬ ಶುಭ ವರ್ತಮಾನವನ್ನು ತಿಳಿಸುವೆನು” ಎಂದನು.
20 ২০ কিন্তু যোয়াব তাকে বললেন, “আজ তুমি সংবাদদাতা হবে না, অন্য দিন খবর দেবে; রাজপুত্র মারা গেছে, এই জন্য আজ তুমি খবর দেবে না৷”
೨೦ಯೋವಾಬನು ಅವನಿಗೆ, “ಈ ಹೊತ್ತಿನ ಸುದ್ದಿಯನ್ನು ತೆಗೆದುಕೊಂಡು ಹೋಗತಕ್ಕವನು ನೀನಲ್ಲ. ಇನ್ನೊಂದು ಸಾರಿ ನಿನ್ನನ್ನು ಕಳುಹಿಸುತ್ತೇನೆ, ಈ ಹೊತ್ತು ಅರಸನ ಮಗನು ಸತ್ತಿರುವುದರಿಂದ ವರ್ತಮಾನವು ಶುಭವಾದುದಲ್ಲ” ಎಂದು ಹೇಳಿದನು.
21 ২১ পরে যোয়াব কূশীয়কে বললেন, “যাও যা দেখলে, রাজাকে গিয়ে বল৷” তাতে কূশীয় যোয়াবকে প্রণাম করে দৌড়ে চলে গেল৷
೨೧ಯೋವಾಬನು ತನ್ನ ಬಳಿಯಲ್ಲಿದ್ದ ಒಬ್ಬ ಕೂಷ್ಯನನ್ನು ಕರೆದು ಅವನಿಗೆ, “ನೀನು ಹೋಗಿ ಕಂಡದ್ದನ್ನು ಅರಸನಿಗೆ ತಿಳಿಸು” ಎಂದು ಆಜ್ಞಾಪಿಸಿದನು. ಅವನು ಯೋವಾಬನಿಗೆ ನಮಸ್ಕರಿಸಿ ಹೊರಟುಹೋದನು.
22 ২২ পরে সাদোকের ছেলে অহীমাস আবার যোয়াবকে বলল, “যা হয় হোক, অনুরোধ করি, কূশীয়ের পিছনে আমাকেও দৌড়াতে দিন ৷” যোয়াব বললেন, “বাছা তুমি কেন দৌড়াবে? তুমি তো খবরের জন্য পুরষ্কার পাবে না?”
೨೨ಚಾದೋಕನ ಮಗನಾದ ಅಹೀಮಾಚನು ಪುನಃ ಯೋವಾಬನಿಗೆ, “ಆಗಿದ್ದಾಗಲಿ, ದಯವಿಟ್ಟು ಆ ಕೂಷ್ಯನ ಹಿಂದೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡು” ಎಂದು ಬೇಡಿಕೊಂಡನು. ಅದಕ್ಕೆ ಅವನು, “ಮಗನೇ ಯಾಕೆ ಹೋಗಬೇಕೆನ್ನುತ್ತೀ? ಅದಕ್ಕಾಗಿ ನಿನಗೆ ಬಹುಮಾನ ಸಿಕ್ಕುವುದಿಲ್ಲವಲ್ಲಾ” ಎಂದನು.
23 ২৩ সে বলল, “যা হয় হোক, আমি দৌড়াব৷” তাতে তিনি বললেন, “দৌড়াও৷” তখন অহীমাস সমভূমির পথ দিয়ে দৌড়াতে দৌড়াতে কূশীয়কে পিছনে ফেলে এগিয়ে গেল৷
೨೩ಆಗ ಅಹೀಮಾಚನು ಪುನಃ “ಚಿಂತೆಯಿಲ್ಲ ನನ್ನನ್ನು ಕಳುಹಿಸು” ಎಂದು ಒತ್ತಾಯಪಡಿಸಿದ್ದರಿಂದ ಯೋವಾಬನು “ಹೋಗು” ಎಂದು ಹೇಳಿದನು. ಆಗ ಅಹೀಮಾಚನು ಯೊರ್ದನ್ ತಗ್ಗಿನಲ್ಲಿರುವ ದಾರಿಯನ್ನು ಹಿಡಿದು ಆ ಕೂಷ್ಯನಿಗಿಂತ ಮುಂದಾಗಿ ಓಡಿದನು.
24 ২৪ সেই দিনের দায়ূদ দুই নগরের ফটকের মাঝখানে বসেছিলেন৷ আর পাহারাদার নগরের ফটকের উপরের দিকে, প্রাচীরে উঠল, আর চোখ তুলে পর্যবেক্ষণ করল, আর দেখল, একজন একা দৌড়ে আসছে৷
೨೪ದಾವೀದನು ಒಳಗಣ ಮತ್ತು ಹೊರಗಣ ಬಾಗಿಲುಗಳ ಮಧ್ಯದಲ್ಲಿ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರರು ಗೋಪುರದ ಮಾಳಿಗೆಯನ್ನು ಹತ್ತಿ ಪ್ರಾಕಾರದ ಗೋಡೆಯ ಬಳಿಯಲ್ಲಿ ನಿಂತು ನೋಡಲು ಒಬ್ಬಂಟಿಗನಾಗಿ ಬರುವ ಒಬ್ಬ ಮನುಷ್ಯನನ್ನು ಕಂಡರು.
25 ২৫ তাতে পাহারাদার চিত্কার করে রাজাকে সেটা বলল; রাজা বললেন, “সে যদি একা হয়, তবে তার কাছে খবর আছে৷” পরে সে আসতে আসতে কাছাকাছি এল৷
೨೫ಅವನು ಕೂಡಲೆ ದಾವೀದನಿಗೆ ತಿಳಿಸಲು ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು” ಎಂದನು. ಆ ಮನುಷ್ಯನು ಬರಬರುತ್ತಾ ಸಮೀಪವಾದನು.
26 ২৬ পাহারাদার আর এক জনকে দৌড়ে আসতে দেখে চিত্কার করে দারোয়ানকে বলল, “দেখ, আর একজন একা দৌড়ে আসছে৷” তখন রাজা বললেন, “সেও খবর আনছে৷”
೨೬ಅಷ್ಟರಲ್ಲಿ ಕಾವಲುಗಾರರು ಓಡುತ್ತಾ ಬರುವ ಇನ್ನೊಬ್ಬನನ್ನು ಕಂಡು ದ್ವಾರಪಾಲಕನ ಮುಖಾಂತರ, “ಇಗೋ, ಇನ್ನೊಬ್ಬನು ಒಬ್ಬಂಟಿಗನಾಗಿ ಬರುತ್ತಿದ್ದಾನೆ” ಎಂದು ಅರಸನಿಗೆ ತಿಳಿಸಿದನು. ಆಗ ಅರಸನು, “ಹಾಗಾದರೆ ಅವನೂ ಸಮಾಚಾರ ತರುವವನು” ಎಂದು ಹೇಳಿದನು.
27 ২৭ পরে পাহারাদার বলল, “প্রথম যে ব্যক্তি দৌড়াচ্ছে তাকে সাদোকের ছেলে অহীমাস বলে মনে হচ্ছে৷” রাজা বললেন, “সে ভাল মানুষ, ভাল খবর নিয়ে আসছে৷”
೨೭ಆಗ ಕಾವಲುಗಾರನು, “ಮುಂದಾಗಿ ಬರುತ್ತಿರುವವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಕಾಣುತ್ತದೆ” ಎಂದನು. ಅದಕ್ಕೆ ಅರಸನು, “ಅವನು ಒಳ್ಳೆಯವನು, ಶುಭವರ್ತಮಾನ ತರುವವನು” ಎಂದನು.
28 ২৮ তখন অহীমাস চিত্কার করে রাজাকে বলল, “মঙ্গল হোক৷” পরে সে রাজার সামনে উপুড় হয়ে প্রণাম করে বলল, “আপনার ঈশ্বর সদাপ্রভু ধন্য, আমার প্রভু মহারাজের বিরুদ্ধে যে লোকেরা হাত তুলেছিল, তাদেরকে তিনি সমর্পণ করেছেন৷”
೨೮ಅಹೀಮಾಚನು ಹತ್ತಿರ ಬಂದು ಅರಸನಿಗೆ, “ಶುಭವಾಗಲಿ” ಎಂದು ಹೇಳಿ ಸಾಷ್ಟಾಂಗನಮಸ್ಕಾರ ಮಾಡಿ, “ಅರಸನಿಗೆ ವಿರೋಧವಾಗಿ ಕೈಯೆತ್ತಿದವರನ್ನು ಸ್ವಾಧೀನಪಡಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ” ಎಂದನು.
29 ২৯ পরে রাজা জিজ্ঞাসা করলেন, “যুবক অবশালোম কি ভালো আছে?” অহীমাস বলল, “যে দিনের যোয়াব মহারাজের দাসকে, আপনার দাস আমাকে পাঠান, সেই দিনের অনেক লোকের ভীড় দেখলাম, কিন্তু কি হয়েছিল তা জানি না৷”
೨೯ಆಗ ಅರಸನು ಅವನನ್ನು, “ಯೌವನಸ್ಥನಾದ ಅಬ್ಷಾಲೋಮನು ಸುರಕ್ಷಿತವಾಗಿದ್ದಾನೋ” ಎಂದು ಕೇಳಿದನು. ಅದಕ್ಕೆ ಅಹೀಮಾಚನು, “ಯೋವಾಬನು ಒಡೆಯರ ಸೇವಕನಾದ ನನ್ನನ್ನು ಕಳುಹಿಸುವಾಗ ನಾನು ಒಂದು ದೊಡ್ಡ ದೊಂಬಿಯನ್ನು ಕಂಡೆನು, ಆದರೆ ಸಂಗತಿ ಏನೆಂಬುದು ನನಗೆ ಗೊತ್ತಾಗಲಿಲ್ಲ” ಎಂದು ಉತ್ತರಕೊಟ್ಟನು.
30 ৩০ রাজা বললেন, “এক পাশে যাও, এখানে দাঁড়াও; তাতে সে গিয়ে এক পাশে দাঁড়াল৷”
೩೦ಆಗ ಅರಸನು ಅವನಿಗೆ, “ನೀನು ಇತ್ತ ನಿಲ್ಲು” ಎಂದು ಆಜ್ಞಾಪಿಸಿದನು. ಅವನು ನಿಂತನು.
31 ৩১ আর দেখ, কূশীয় আসল ও কূশীয় বলল, “আমার প্রভু মহারাজের জন্য খবর এনেছি; আপনার বিরুদ্ধে যারা উঠেছিল, সেই সবার হাত থেকে সদাপ্রভু আজ আপনাকে রক্ষা করেছেন৷”
೩೧ಅಷ್ಟರಲ್ಲಿ ಕೂಷ್ಯನು ಬಂದು, “ನನ್ನ ಒಡೆಯನಾದ ಅರಸನಿಗೆ ಶುಭವರ್ತಮಾನ ತಂದಿದ್ದೇನೆ. ಯೆಹೋವನು ನಿನಗೆ ವಿರೋಧವಾಗಿ ಎದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾನೆ” ಎಂದನು.
32 ৩২ রাজা কূশীয়কে জিজ্ঞাসা করলেন, “যুবক অবশালোম কি ভালো আছে?” কূশীয় বলল, “আমার প্রভু মহারাজের শত্রুরা ও যারা অমঙ্গল করার জন্য আপনার বিরুদ্ধে উঠে, তারা সকলের সেই যুবকের মত হোক৷”
೩೨ಅರಸನು ಅವನನ್ನು, “ಯೌವನಸ್ಥನಾದ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೋ?” ಎಂದು ಕೇಳಲು ಅವನು, “ನನ್ನ ಒಡೆಯನಾದ ಅರಸನ ಶತ್ರುಗಳಿಗೂ, ಅವನಿಗೆ ಕೇಡು ಮಾಡುವುದಕ್ಕೆ ಎದ್ದು ನಿಂತವರೆಲ್ಲರಿಗೂ ಆ ಯೌವನಸ್ಥನಿಗಾದ ಗತಿಯೇ ಆಗಲಿ” ಎಂದು ಉತ್ತರ ಕೊಟ್ಟನು.
33 ৩৩ তখন রাজা অধৈর্য্য হয়ে নগরের ফটকের ছাদের উপরের কুঠরীতে উঠে কাঁদতে লাগলেন এবং যেতে যেতে বললেন, “হায়! আমার ছেলে অবশালোম! আমার ছেলে, আমার ছেলে অবশালোম! কেন তোমার পরিবর্তে আমি মারা গেলাম না? হায় অবশালোম! আমার ছেলে! আমার ছেলে!”
೩೩ಇದನ್ನು ಕೇಳಿ ಅರಸನು ಎದೆಯೊಡದವನಾಗಿ, “ನನ್ನ ಮಗನೇ, ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅಬ್ಷಾಲೋಮನೇ! ನನ್ನ ಮಗನೇ, ನನ್ನ ಮಗನೇ!” ಎಂದು ಕೂಗಿ ಅಳುತ್ತಾ ಪಟ್ಟಣದ ಹೆಬ್ಬಾಗಿಲಿನ ಮೇಲಿರುವ ಕೋಣೆಗೆ ಹೋದನು.